Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

₹1.5 ಕೋಟಿ ಲಾಟರಿ ಗೆದ್ದ ದಂಪತಿ: ಭಯದಲ್ಲಿ ಮನೆಯನ್ನೇ ತೊರೆದ ಕೃಷಿ ಕಾರ್ಮಿಕರ ಕುಟುಂಬ

Spread the love

ಫರೀದ್​ಕೋಟ್: ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಈ ದಿನಗೂಲಿ ಕಾರ್ಮಿಕನ ಕುಟುಂಬದಲ್ಲಿ ಈಗ ಸಂಭ್ರಮವೋ ಸಂಭ್ರಮ. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಲಾಟರಿ(Lottery)ಯಿಂದ ಕೋಟ್ಯಧಿಪತಿಯಾಗಿದ್ದಾರೆ. ಆದರೆ ಈ ಹಣದಿಂದಾಗಿ ಅವರು ಮನೆಯನ್ನು ತೊರೆಯಬೇಕಾಯಿತು. ದಂಪತಿಗೆ ಸಂತೋಷ ಹಾಗೂ ಭಯ ಒಟ್ಟೊಟ್ಟಿಗೆ ಆಗಿದೆ. ಫರೀದ್‌ಕೋಟ್ ಜಿಲ್ಲೆಯ ಸೈಡೆಕೆ ಗ್ರಾಮದ ದಿನಗೂಲಿ ಕೃಷಿ ಕಾರ್ಮಿಕರಾದ ನಸೀಬ್ ಕೌರ್ ಮತ್ತು ಅವರ ಪತಿ ರಾಮ್ ಸಿಂಗ್, ಪಂಜಾಬ್ ರಾಜ್ಯ ಲಾಟರಿಯಲ್ಲಿ 1.5 ಕೋಟಿ ರೂ. ಗಳಿಸಿದ್ದರು.

ಖರ್ಚು ಮಾಡಿದ್ದು ಕೇವಲ 200 ರೂ. ಲಾಟರಿ ಗೆದ್ದ ದಂಪತಿಗೆ ಸಂತೋಷದ ಜತೆ ಭಯ ಹಾಗೂ ಆತಂಕವೂ ಎದುರಾಗಿತ್ತು. ಈ ಸುದ್ದಿ ಅಕ್ಕ ಪಕ್ಕದ ಮನೆಯವರೆಗೆ ಸುದ್ದಿ ತಿಳಿದರೆ ಹಣ ಕಳ್ಳತನವಾಗಬಹುದು ಅಥವಾ ಯಾರಾದರೂ ಹಣವನ್ನು ಕೇಳಬಹುದು ಎನ್ನುವ ಭಯದಲ್ಲಿ ಮನೆಯನ್ನೇ ಬಿಟ್ಟು ಹೋಗಿದ್ದಾರೆ.

ತಮ್ಮ ಸುರಕ್ಷತೆಯ ದೃಷ್ಟಿಯಿಂದ ಭಯದಲ್ಲಿ ಕುಟುಂಬವು ಮನೆಗೆ ಬೀಗ ಹಾಕಿ, ಮೊಬೈಲ್ ಫೋನ್​ಗಳನ್ನು ಸ್ವಿಚ್ ಆಫ್ ಮಾಡಿ, ರಹಸ್ಯ ಸ್ಥಳಕ್ಕೆ ಹೋಗಿತ್ತು. ಮಂಗಳವಾರ ಪರಿಸ್ಥಿತಿಯ ಬಗ್ಗೆ ತಿಳಿದ ಫರೀದ್‌ಕೋಟ್ ಪೊಲೀಸರು ತಕ್ಷಣವೇ ಕುಟುಂಬವನ್ನು ಸಂಪರ್ಕಿಸಿ ಧೈರ್ಯ ತುಂಬಿ ರಕ್ಷಣೆ ನೀಡಿದರು.

ನಸೀಬ್ ಕೌರ್ ಎಂಬ ಮಹಿಳೆ ಸುಮಾರು 15-20 ದಿನಗಳ ಹಿಂದೆ 200 ರೂ. ಮೌಲ್ಯದ ಲಾಟರಿ ಟಿಕೆಟ್ ಖರೀದಿಸಿದ್ದರು, ಅದರಲ್ಲಿ ಅವರು 1.5 ಕೋಟಿ ರೂ. ಬಹುಮಾನ ಗೆದ್ದಿದ್ದಾರೆ ಎಂಬುದು ತಿಳಿದುಬಂದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ) ತರ್ಲೋಚನ್ ಸಿಂಗ್ ಹೇಳಿದ್ದಾರೆ.

ತಮ್ಮ ಹಠಾತ್ ಸಂಪತ್ತಿನಿಂದ ಯಾರಾದರೂ ತಮಗೆ ಹಾನಿ ಮಾಡಬಹುದು ಅಥವಾ ಸುಲಿಗೆ ಬೇಡಿಕೆ ಇಡಬಹುದು ಎಂಬ ಭಯವನ್ನು ಕುಟುಂಬ ವ್ಯಕ್ತಪಡಿಸಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ಯಾವಾಗಲೂ ಇದ್ದಾರೆ ಮತ್ತು ಅವರ ಕುಟುಂಬಕ್ಕೆ ಯಾವುದೇ ಹಾನಿಯಾಗುವುದಿಲ್ಲ ಎಂದು ನಾವು ಅವರಿಗೆ ಭರವಸೆ ನೀಡಿದ್ದೇವೆ ಎಂದು ಅವರು ಹೇಳಿದರು.


Spread the love
Share:

administrator

Leave a Reply

Your email address will not be published. Required fields are marked *