Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗದಗ: ಮೆಕ್ಕೆಜೋಳದ ರಾಶಿಗೆ ಆಕಸ್ಮಿಕ ಬೆಂಕಿ, ಲಕ್ಷಾಂತರ ರೂ. ಬೆಳೆ ಭಸ್ಮ

Spread the love

ಗದಗ: ಮೆಕ್ಕೆಜೋಳದ(Maize) ರಾಶಿಗೆ ಆಕಸ್ಮಿಕ ಬೆಂಕಿ (Fire) ತಗುಲಿ ಅಪಾರ ಪ್ರಮಾಣದ ಬೆಳೆ ಸುಟ್ಟು ಭಸ್ಮವಾದ ಘಟನೆ ಗದಗ (Gadag) ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮಂಜಲಾಪೂರ ಗ್ರಾಮದಲ್ಲಿ ನಡೆದಿದೆ.

ರೈತರು ಊರ ಬಳಿಯ ಬಯಲು ಜಾಗೆಯಲ್ಲಿ ಮೆಕ್ಕೆಜೋಳ ಬೆಳೆ ರಾಶಿ ಮಾಡಲು ಒಂದೇ ಕಡೆಗೆ ಸಂಗ್ರಹಿಸಿದ್ದರು. ಅದರಲ್ಲಿ ಕಮಲವ್ವ ಹೊಸಮನಿ, ಶಿರಾಜುದ್ದಿನ್ ಹೊಸಮನಿ, ಪರಮೇಶ ಕಿತ್ಲಿ, ದಾನಪ್ಪ ಲಮಾಣಿ ಅವರ ಮೆಕ್ಕೆಜೋಳ ಮೆಕ್ಕೆಜೋಳ ಸುಟ್ಟು ನಾಶವಾಗಿವೆ

ಗಾಳಿ, ಬಿಸಿಲು ಪ್ರಮಾಣ ಹೆಚ್ಚಾದ್ದರಿಂದ ಅಕ್ಕ ಪಕ್ಕದ ರಾಶಿಗೂ ಬೆಂಕಿ ತಗುಲಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳಿಯರು ಸಾಹಸಪಟ್ಟು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿಯಿಂದ ನಾಶವಾದ ಬೆಳೆಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಸರ್ಕಾರಕ್ಕೆ ಆಗ್ರಹಿಸಿದರು. ರೈತರ ಲಕ್ಷಾಂತರ ರೂಪಾಯಿ ಬೆಳೆ ಹಾನಿಯಾಗಿದೆ. ಕೈಗೆ ಬಂದ ತುತ್ತು ರೈತರ ಬಾಯಿಗೆ ಬರದಂತಾದ ಪರಿಸ್ಥಿತಿ ಉಂಟಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಕಳೆದುಕೊಂಡು ಮಂಜಲಾಪೂರ ಗ್ರಾಮದ ರೈತರು ಕಂಗಾಲಾಗಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *