ಬಾಂಗ್ಲಾದೇಶಕ್ಕೆ ಗಡಿಪಾರಾಗಿದ್ದ ಗರ್ಭಿಣಿ, ಪುತ್ರ ಭಾರತಕ್ಕೆ ವಾಪಸ್
ಹೊಸದಿಲ್ಲಿ : ವಲಸಿಗರು ಎಂದು ತಪ್ಪು ತಿಳಿದು ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಗಿದ್ದ ಪಶ್ಚಿಮ ಬಂಗಾಳದ ಗರ್ಭಿಣಿ ಮಹಿಳೆ ಮತ್ತು ಅವರ ಪುತ್ರನನ್ನು ಶುಕ್ರವಾರ ಭಾರತಕ್ಕೆ ಮರಳಿ ಕರೆತರಲಾಗಿದೆ.ಸುನಾಲಿ ಖಾತುನ್ ಮತ್ತು ಅವರ 8 ವರ್ಷದ ಮಗ ಶಬೀರ್ ಅವರನ್ನು ಮಾನವೀಯತೆಯ ಆಧಾರದ ಮೇಲೆ ವಾಪಸ್ ಕರೆತರಲು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.ಈ ಹಿಂದೆ, ಜೂನ್‌ನಲ್ಲಿ ಬಂಧಿಸಿ ಬಾಂಗ್ಲಾದೇಶಕ್ಕೆ ಕಳುಹಿಸಲಾಗಿದ್ದ ಈ ಮೂವರನ್ನು ಕಲ್ಕತ್ತಾ ಹೈಕೋರ್ಟ್ ಆದೇಶದ ಮೇರೆಗೆ ವಾಪಸ್ ಕರೆತರಲಾಗಿದೆ.ಪ್ರಸ್ತುತ ಸುನಾಲಿ ಖಾತುನ್ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಯುತ್ತಿದ್ದು, ಅವರ ಪತಿ ದಾನಿಶ್ ಮಾತ್ರ ಇನ್ನೂ ಬಾಂಗ್ಲಾದೇಶದಲ್ಲಿ ಸಿಲುಕಿದ್ದಾರೆ.ಮಹಾದಿಪುರ ಗಡಿ ಮೂಲಕ ಗರ್ಭಿಣಿ ಮಹಿಳೆ ಮತ್ತು ಮಗ ಸುರಕ್ಷಿತವಾಗಿ ಭಾರತ ಪ್ರವೇಶಿಸಿದ್ದು, ಈ ಮೂಲಕ ಕುಟುಂಬಕ್ಕೆ ಸ್ವಲ್ಪ ನೆಮ್ಮದಿ ಸಿಕ್ಕಂತಾಗಿದೆ.
