Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸುಷ್ಮಾ ಸ್ವರಾಜ್ ಪತಿ, ಮಿಜೋರಾಂ ಮಾಜಿ ರಾಜ್ಯಪಾಲ ಸ್ವರಾಜ್ ಕೌಶಲ್ (73) ನಿಧನ: ದೆಹಲಿ AIIMSನಲ್ಲಿ ಕೊನೆಯುಸಿರು

Spread the love

ನವದೆಹಲಿ: ಮಿಜೋರಾಂನ ಮಾಜಿ ರಾಜ್ಯಪಾಲ ಮತ್ತು ಬಿಜೆಪಿ ಹಿರಿಯ ನಾಯಕಿ ದಿವಂಗತ ಸುಷ್ಮಾ ಸ್ವರಾಜ್ (Sushma Swaraj) ಅವರ ಪತಿ ಸ್ವರಾಜ್ ಕೌಶಲ್ (73)  (Swaraj Kaushal) ಗುರುವಾರ (ಡಿ.4) ನಿಧನರಾದರು. ಕೌಶಲ್ ಅವರು ಹಿರಿಯ ವಕೀಲರು ಹಾಗೂ ಸಂಸದೆ ಬಾನ್ಸೂರಿ ಸ್ವರಾಜ್ ಅವರ ತಂದೆಯಾಗಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ದೆಹಲಿ ಬಿಜೆಪಿ (BJP) ಮಾಹಿತಿ ಹಂಚಿಕೊಂಡಿದೆ. ಮಿಜೋರಾಂನ ಮಾಜಿ ರಾಜ್ಯಪಾಲರು ಹಾಗೂ ಹಿರಿಯ ವಕೀಲರಾಗಿದ್ದ ಸ್ವರಾಜ್ ಕೌಶಲ್ ಅವರ ಹಠಾತ್ ನಿಧನದ ಸುದ್ದಿ ತಿಳಿಸಲು ವಿಷಾದಿಸುತ್ತೇವೆ ಎಂದು ಪೋಸ್ಟ್‌ನಲ್ಲಿ ತಿಳಿಸಲಾಗಿದೆ. ಮಧ್ಯಾಹ್ನ ಎದೆನೋವು ಕಾಣಿಸಿಕೊಂಡ ನಂತರ AIIMSಗೆ ಅವರನ್ನು ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಲೋಧಿ ರಸ್ತೆಯ ಸ್ಮಶಾನದಲ್ಲಿ ಕೌಶಲ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನೆರವೇರಲಿದೆ ಎಂದು ವರದಿಯಾಗಿದೆ.


Spread the love
Share:

administrator

Leave a Reply

Your email address will not be published. Required fields are marked *