Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸೌಂದರ್ಯ ಸ್ಪರ್ಧೆಯೇ ಹತ್ಯೆಗೆ ಕಾರಣ: ಮೂವರು ಹೆಣ್ಣು ಮಕ್ಕಳು ತನಗಿಂತ ‘ಹೆಚ್ಚು ಸುಂದರ’ ಎಂಬ ಕಾರಣಕ್ಕೆ ಕೊಲೆ; ಮಗನ ಹತ್ಯೆಗೈದ ಕಾರಣ ತಿಳಿದಿಲ್ಲ

Spread the love

ಚಂಡೀಗಢ: ಹರಿಯಾಣದ (Haryana) ಮಹಿಳೆಯೊಬ್ಬಳಿಗೆ ತನಗಿಂತ ಯಾರು ಕೂಡ ಸುಂದರವಾಗಿ ಕಾಣಬಾರದು. ಹಾಗೇನಾದ್ರು, ಚೆನ್ನಾಗಿ ಕಂಡರೆ ಅವರ ಕಥೆ ಮುಗೀತು. ಇವರು ನನಗಿಂತ ಸುಂದರವಾಗಿದ್ದಾರೆ ಅಂತ ಮಕ್ಕಳನ್ನು ಈಕೆ ಕ್ರೂರವಾಗಿ ಕೊಂದಿದ್ದಾಳೆ. ಹೆತ್ತ ಮಗನನ್ನೂ ಹತ್ಯೆಗೈದಿದ್ದಾಳೆ. ಈಕೆಯ ಕೊಲೆ ಪ್ರಸಂಗ ನಿಜಕ್ಕೂ ಅಚ್ಚರಿ ಜೊತೆಗೆ ಆತಂಕ ಮೂಡಿಸುವಂತಿದೆ.

ಪೂನಂ ನಾಲ್ಕು ಮಕ್ಕಳನ್ನು ಹತ್ಯೆ ಮಾಡಿದ ಮಹಿಳೆ. ಈಕೆ 2021ರಿಂದ ತನ್ನ ಕುಕೃತ್ಯವನ್ನು ಪಾಲಿಸಿಕೊಂಡು ಬಂದಿದ್ದಾಳೆ. ಕೆಲದಿನಗಳ ಹಿಂದಷ್ಟೇ ತನ್ನ ಸೋದರ ಸಂಬಂಧಿ ಮಗಳನ್ನು ಹತ್ಯೆ ಮಾಡಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಕುಟುಂಬದ ಕಾರ್ಯಕ್ರಮಕ್ಕಾಗಿ ಪೂನಂ ಹೋಗಿರುತ್ತಾಳೆ. ಅಲ್ಲಿ ಸೋದರ ಸಂಬಂಧಿ ಮಗಳನ್ನು ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಹತ್ಯೆ ಮಾಡ್ತಾಳೆ. ಕಳೆದ ನಾಲ್ಕು ವರ್ಷಗಳಲ್ಲಿ ಪೂನಂ ತನ್ನ ನಾಲ್ಕು ವರ್ಷದ ಮಗ ಸೇರಿದಂತೆ ಇತರ ಮೂವರು ಮಕ್ಕಳನ್ನು ಕೊಂದಿದ್ದಾಳೆ ಎಂದು ಆರೋಪಿಸಲಾಗಿದೆ.

ಹೆತ್ತ ಮಗನನ್ನು ಕೊಂದಿದ್ದು ಯಾಕೆ?
ನಾಲ್ಕು ಮಕ್ಕಳಲ್ಲಿ ಮೂವರು ಚಿಕ್ಕ ಹುಡುಗಿಯರಾಗಿದ್ದರು. ಅಂದರೆ, ಹುಡುಗಿಯರು ತನಗಿಂತ ‘ಹೆಚ್ಚು ಸುಂದರ’ ಎಂಬ ಕಾರಣಕ್ಕಾಗಿ ಪೂನಂ ಅವರನ್ನು ಕೊಂದಿದ್ದಾಳೆ. ಅವಳು ತನ್ನ ಮಗನನ್ನು ಏಕೆ ಕೊಂದಳು ಎಂಬುದು ಸ್ಪಷ್ಟವಾಗಿಲ್ಲ.

ಕೊಲೆಯಾದ ನಾಲ್ಕು ಮಕ್ಕಳು ಯರ‍್ಯಾರು?
2023 ರಲ್ಲಿ ತನ್ನ ಅತ್ತಿಗೆಯ ಒಂಬತ್ತು ವರ್ಷದ ಮಗು ಇಶಿಕಾಳನ್ನು ಮೊದಲ ಬಾರಿ ಕೊಲೆ ಮಾಡಿದ್ದಾಳೆ. 2023ರಲ್ಲಿ ಶುಭಂನನ್ನು ಹತ್ಯೆ ಮಾಡಿದ್ದಳು. ಇದು ಎರಡನೇ ಕೊಲೆಯಾಗಿತ್ತು. ಮೂರನೆಯವಳು ಎಂಟು ವರ್ಷದ ಜಿಯಾ. ನಾಲ್ಕನೆಯವಳು ವಿಧಿ.

ಹಿಂದಿನ ಮೂರು ಕೊಲೆಗಳ ಬಗ್ಗೆ ವಿವರಗಳನ್ನು ಬಿಡುಗಡೆ ಮಾಡಲಾಗಿಲ್ಲ. ಆದರೆ, ವಿಧಿಯನ್ನು ಸಂಬಂಧಿಕರ ಮನೆಯ ಕೋಣೆಯಲ್ಲಿ ಕೊಂದಿರುವುದಾಗಿ ಪೂನಂ ಹೇಳಿದ್ದಾಳೆ. ವಿಧಿಯ ತಂದೆ ಸಂದೀಪ್ ಅವರೊಂದಿಗೆ ಓಆಖಿಗಿ ಮಾತನಾಡುತ್ತಾ, ಆಕೆಯ ಅಪರಾಧಗಳಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದರು. ‘ನನಗೆ ಅವಳ ಬಗ್ಗೆ ಅನುಮಾನಗಳಿದ್ದವು. ಆದರೆ ನನ್ನ ಕುಟುಂಬವು ಯಾವಾಗಲೂ ನನ್ನ ಅಭಿಪ್ರಾಯಗಳನ್ನು ವಿರೋಧಿಸುತ್ತಿತ್ತು’ ಎಂದು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *