ಬಂಡೀಪುರ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಸಿಸಿಟಿವಿಯಲ್ಲಿ ಅಪಹರಣ ದೃಶ್ಯ ಸೆರೆ

ಬಂಡೀಪುರಕ್ಕೆ ಬಂದ ಕುಟುಂಬ ನಿಗೂಢ ನಾಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್! ಸಿಸಿಟಿವಿಯಿಂದ ಬಯಲಾಯ್ತು ಕಿಡ್ನಾಪ್ ಕಹಾನಿ.

ಚಾಮರಾಜನಗರ: ಭಾನುವಾರ ರಾತ್ರಿ ಬಂಡೀಪುರದಲ್ಲಿ ವಾಸ್ತವ್ಯ ಹೂಡಿದ್ದ ಬೆಂಗಳೂರು ಮೂಲದ ಕುಟುಂಬವೊಂದು ನಿಗೂಢವಾಗಿ ನಾಪತ್ತೆಯಾಗಿದೆ. ಗಂಡ, ಹೆಂಡ್ತಿ ಮಗ ಮೂವರು ಕಾಣೆಯಾಗಿದ್ದಾರೆ. ಈ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಬೆಂಗಳೂರಿನಿಂದ ಬಂದಿದ್ದ ಎರಡು ತಂಡಗಳು ಅಪಹರಣ ಮಾಡಿರುವ ಸಾಧ್ಯತೆ
ನಿನ್ನೆ ರಾತ್ರಿ 10.30 ರ ಸುಮಾರಿಗೆ ನಿಶಾಂತ್ ಮತ್ತು ಪತ್ನಿ ಚಂದನಾ ತಮ್ಮ ತಂದೆಯ ಅಲ್ಟ್ರೋಜ್ ಕಾರಿನಲ್ಲಿ ರೆಸಾರ್ಟ್ ನಿಂದ ಹೊರಟಿದ್ದರು. ಬೆಂಗಳೂರಿನಿಂದ ಬಂದಿದ್ದ ಎರಡು ತಂಡಗಳು ರೆಸಾರ್ಟ್ ಒಳಗೆ ಹೋಗಿ ನಿಶಾಂತ್ ಕುಟುಂಬ ಅಲ್ಲಿದೆಯೇ ಎಂದು ಖಚಿತಪಡಿಸಿಕೊಂಡಿವೆ. ಬಿಳಿ ಬಣ್ಣದ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಬಂದಿದ್ದ ಅಪಹರಣಕಾರರ ತಂಡವು ರೆಸಾರ್ಟ್ ಒಳಗೆ ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.