Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿನಲ್ಲಿ ನವವಿವಾಹಿತೆ ಆತ್ಮಹತ್ಯೆ: ಪ್ರೀತಿಸಿ ಮದುವೆಯಾದ ಮೂರೇ ತಿಂಗಳಿಗೆ ನೇಣಿಗೆ ಶರಣಾದ ಅಮೂಲ್ಯ (23)

Spread the love

ಬೆಂಗಳೂರು: ಮನೆಯವರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿದ್ದ ನವ ವಿವಾಹಿತೆ ಮೂರೇ ತಿಂಗಳಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಅಂದ್ರಹಳ್ಳಿಯ ವಿದ್ಯಮಾನ್ಯ ನಗರದಲ್ಲಿ ನಡೆದಿದೆ

ಅಮೂಲ್ಯ (23) ಗಂಡ ಅಭಿಷೇಕ್‌ ಮನೆಯಲ್ಲಿ ನೇಣಿಗೆ ಶರಣಾದ ವಿವಾಹಿತೆ. 

ಅಮೂಲ್ಯ-ಅಭಿಷೇಕ್‌ ಪ್ರೇಮಕ್ಕೆ ಮನೆಯವರ ವಿರೋಧವಿತ್ತು. ಕೊನೆಗೆ ಹೇಗೋ ಇಬ್ಬರು ಕುಟುಂಬದವರನ್ನ ಒಪ್ಪಿಸಿ ಮೂರು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ನವ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರೋದು ಅನುಮಾನ ಮೂಡಿಸಿದೆ

ಮೃತ ಅಮೂಲ್ಯ ಕುಟುಂಬಸ್ಥರು ಮಗಳ ಸಾವಿಗೆ ಪತಿ ಅಭಿಷೇಕ್‌ ಕಾರಣ ಅಂತ ಆರೋಪಿಸಿದ್ದಾರೆ. ಪತಿಗೆ ಪತ್ನಿಯ ಮೇಲೆ ಅನುಮಾನ ಇತ್ತು, ಯಾರ ಜೊತೆಗೂ ಮಾತಾಡೋಕೆ ಬಿಡ್ತಾ ಇರಲಿಲ್ಲ. ಆಡುಗೆ ಮಾಡೋಕೆ ಬರಲ್ಲ ಅಂತಾ ಕಿರುಕುಳ ಕೊಡ್ತಾ ಇದ್ರು. ಅವ್ರೇ ಹೊಡೆದು ಕೊಲೆ ಮಾಡಿದ್ದಾರೆ ಅಂತಲೂ ಆರೋಪಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಬ್ಯಾಡರಹಳ್ಳಿ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಪತಿ ಅಭಿಷೇಕ್‌ನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.


Spread the love
Share:

administrator

Leave a Reply

Your email address will not be published. Required fields are marked *