ರೇಣುಕಾಸ್ವಾಮಿ ಕೊಲೆ ಕೇಸ್ ವಿಚಾರಣೆ ಸೆಷನ್ಸ್ ಕೋರ್ಟ್ನಲ್ಲಿ ಆರಂಭ: ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರು!

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ನ (Renukaswamy Murder Case) ವಿಚಾರಣೆ ಇವತ್ತಿನಿಂದ ಸೆಷನ್ಸ್ ಕೋರ್ಟ್ನಲ್ಲಿ ಆರಂಭವಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ (Darshan), ಪವಿತ್ರಾ ಗೌಡ ಸೇರಿ ಎಲ್ಲಾ ಆರೋಪಿಗಳು ಹಾಜರಾಗಿದ್ದರು.


ಎ-1 ದೂರುದಾರ ವಾಚ್ಮ್ಯಾನ್, ಎ-7 ರೇಣುಕಾಸ್ವಾಮಿ ತಂದೆ, ಎ-8 ರೇಣುಕಾಸ್ವಾಮಿ ಪ್ರಾಸಿಕ್ಯೂಷನ್ಗೆ ಆರೋಪಿಗಳ ಪರ ವಕೀಲರು ಆಕ್ಷೇಪಿಸಿದ್ರು. ಪಿಕ್ ಅಂಡ್ ಚೂಸ್ ಮಾಡಿ ಸಮನ್ಸ್ ಮಾಡುವುದು ಸರಿಯಲ್ಲ. ಆರ್ಡರ್ ವೈಸ್ ಸಮನ್ಸ್ ನೀಡುವಂತೆ ಮನವಿ ಮಾಡಿದರು

ಆರೋಪಿಗಳ ಪರ ವಕೀಲರು ಹೀಗೆ ಮಾಡಬೇಕು ಅಂತ ಹೇಳಲು ಸಾಧ್ಯವಿಲ್ಲ ಅಂತ ಎಎಸ್ಪಿ ವಾದಿಸಿದರು. ಆದರೆ, ಯಾರಿಗೆ ಸಮನ್ಸ್ ಜಾರಿ ಮಾಡಬೇಕು ಎಂಬ ಬಗ್ಗೆ ನಾಳೆ ಆದೇಶ ಮಾಡೋದಾಗಿ ಕೋರ್ಟ್ ಹೇಳಿದೆ.

ಈ ಮಧ್ಯೆ, ಜೈಲಿನಲ್ಲಿ ಎಲ್ಲರೂ ಒಂದೇ ಬ್ಯಾರಕ್ನಲ್ಲಿದ್ದೀವೆ. ಮೈಂಡ್ ಅಪ್ಸೆಟ್ ಆಗ್ತಿದೆ. ಹಾಗಾಗಿ, ಟಿವಿ ಬೇಕು ಅಂತ ದರ್ಶನ್ & ಗ್ಯಾಂಗ್ ಜಡ್ಜ್ ಮುಂದೆ ಮನವಿ ಇಟ್ಟಿದೆ. ಜೈಲರ್ಗೆ ಹೇಳೋದಾಗಿ ಜಡ್ಜ್ ಹೇಳಿದ್ದಾರೆ. ಈ ಮಧ್ಯೆ, ದರ್ಶನ್ ಮನೆಯಲ್ಲಿ ಸೀಜ್ ಮಾಡಲಾಗಿರುವ 82 ಲಕ್ಷ ರೂಪಾಯಿಯನ್ನು ಇಡಿ ಸುಪರ್ದಿಗೆ ವಹಿಸಲಾಗಿದೆ.