ಬೆಂಗಳೂರು ಏರ್‌ಪೋರ್ಟ್‌ನಿಂದ 20 ವಿಮಾನಗಳ ಹಾರಾಟ ರದ್ದು: ತಾಂತ್ರಿಕ ದೋಷ, ಪೈಲಟ್ ಸಮಸ್ಯೆ ಕಾರಣ

ಚಿಕ್ಕಬಳ್ಳಾಪುರ: ತಾಂತ್ರಿಕ ಕಾರಣಗಳಿಂದ ಬೆಂಗಳೂರು ಏರ್‌ಪೋರ್ಟ್‌ನಿಂದ (Bengaluru Airport) 20 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ.


ದೇಶದ ವಿವಿಧ ಭಾಗಗಳಿಗೆ ವಿಮಾನಗಳು ತೆರಳಬೇಕಿತ್ತು. ತಾಂತ್ರಿಕ ಕಾರಣಗಳು, ಪೈಲಟ್ ಸಮಸ್ಯೆ, ಸಾಫ್ಟ್‌ವೇರ್ ಸಮಸ್ಯೆಗಳಿಂದ ವಿಮಾನಗಳ ಹಾರಾಟ ರದ್ದು ಮಾಡಲಾಗಿದೆ.

ದೆಹಲಿ, ಕೋಲ್ಕತ್ತಾ, ಅಹಮದಾಬಾದ್, ಗೋವಾ, ಪುಣೆ ಸೇರಿ ಹಲವು ಕಡೆ ವಿಮಾನಗಳು ಹಾರಾಟ ನಡೆಸಬೇಕಿತ್ತು. ಕಳೆದ ಮಧ್ಯರಾತ್ರಿಯಿಂದ ಇದುವರೆಗೂ 20 ವಿಮಾನ ಹಾರಾಟ ರದ್ದಾಗಿದೆ.
