Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೋಲಾರದಲ್ಲಿ ಖಾಸಗಿ ಬಸ್ ಅಪಘಾತ: ಡಿವೈಡರ್‌ಗೆ ಡಿಕ್ಕಿ, ಓರ್ವ ಮಹಿಳೆ ಸಾವು, ಹಲವರಿಗೆ ಗಾಯ

Spread the love

ಕೋಲಾರ: ಖಾಸಗಿ ಬಸ್ (Private Bus) ಡಿವೈಡರ್‌ಗೆ (Divider) ಡಿಕ್ಕಿಯಾಗಿ ಪಲ್ಟಿಯಾದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ (Srinivaspur) ತಾಲೂಕಿನ ಮಂಚಿನೀಳ್ಳಕೋಟೆ ಗ್ರಾಮದ ಬಳಿ ಮುಂಜಾನೆ ನಸುಕಿನ ಜಾವ ಸುಮಾರು 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಹರಿತ ಟ್ರಾವೆಲ್ಸ್‌ನ ಖಾಸಗಿ ಬಸ್ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ರಭಸಕ್ಕೆ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದ ಪೊದುಟೂರು ಮೂಲದ ಅನಿತಾ (58) ಮೃತ ಮಹಿಳೆ. ಅಪಘಾತದಲ್ಲಿ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.

ಖಾಸಗಿ ಬಸ್ ಆಂದ್ರಪ್ರದೇಶದ ಬದ್ವೆಲ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ವೇಳೆ ಡಿವೈಡರ್‌ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬಸ್‌ನ ಚಕ್ರಗಳು ಬೇರ್ಪಟ್ಟಿದೆ. ಗಾಯಾಳುಗಳನ್ನು ಆಂಧ್ರಪ್ರದೇಶದ ಮದನಪಲ್ಲಿ ಹಾಗೂ ಶ್ರೀನಿವಾಸಪುರ, ಕೋಲಾರ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಸ್ಥಳಕ್ಕೆ ಭೇಟಿ ನೀಡಿದ ರಾಯಲ್ಪಾಡು ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *