Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಮಹಿಳೆಯನ್ನು ಕೊಂದು ಆತ್ಮಹತ್ಯೆ

Spread the love

ಬೆಂಗಳೂರು: ತನ್ನ ಜೊತೆ ಲಿವಿಂಗ್ ರಿಲೇಷನ್​​ಶಿಪ್​​ನಲ್ಲಿದ್ದ ಮಹಿಳೆಯನ್ನು (Woman) ಕೊಂದು ಬಳಿಕ ಹಂತಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಇಂದಿರಾ ಪ್ರಿಯದರ್ಶಿನಿ ನಗರದ ಮನೆಯಲ್ಲಿ‌ ನಡೆದಿದೆ. 51 ವರ್ಷದ ಲಕ್ಷ್ಮೀನಾರಾಯಣ ಎನ್ನುವ ವ್ಯಕ್ತಿ, ಲಲಿತಾಳಣ್ನು (49) ಕೊಂದು ಬಳಿಕ ತಾನೂ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಲಕ್ಷ್ಮೀನಾರಾಯಣ ಹೆಂಡತಿಯನ್ನು ಲಲಿತಾಳೊಂದಿಗೆ ಪ್ರತ್ಯೇಕ ಮನೆ ಮಾಡಿಕೊಂಡಿದ್ದ. ಆದ್ರೆ, ಇಂದು (ಡಿಸೆಂಬರ್ 02) ಬೆಳಗ್ಗೆ ಮನೆಯ ಬಾಗಿಲು ತೆರೆದೇ ಇತ್ತು. ಆದರೂ ಮನೆಯಲ್ಲಿ ಯಾರು ಕಾಣಿಸಿಲ್ಲ. ಇದರಿಂದ ಅನುಮಾನಗೊಂಡ ಪಕ್ಕದ ಮನೆಯವರು ಮನೆಯೊಳಗೆ ಬಂದು ನೋಡಿದಾಗ ಇಬ್ಬರು ಮೃತಪಟ್ಟಿರುವುದು ಬೆಳಕಿಗೆ ಬಮದಿದೆ.

ಗಂಡ ಸಾವನ್ನಪ್ಪಿದ ಬಳಿಕ ಲಲಿತಾ, ಲಕ್ಷ್ಮೀ ನಾರಾಯಣ ಜೊತೆ ಸಂಬಂಧ ಹೊಂದಿದ್ದಳು. ಇನ್ನು ಲಕ್ಷ್ಮೀ ನಾರಾಯಣ ಸಹ ಪತ್ನಿಯನ್ನು ತೊರೆದು ಲಲಿತಾಳೊಂದಿಗೆ ಪ್ರತ್ಯೇಕ ಮನೆ ಮಾಡಿಕೊಂಡಿದ್ದ. ಹೀಗೆ ಇಬ್ಬರು ಲಿವಿಂಗ್ ರಿಲೇಷನ್​ ಶಿಪ್​​ನಲ್ಲಿದ್ದ. ಆದ್ರೆ, ಏಕಾಏಕಿ ಲಲಿತಾ ನಡತೆ ಬಗ್ಗೆ ಲಕ್ಷ್ಮೀ ನಾರಾಯಣ ಪ್ರಶ್ನಿಸಿ ಗಲಾಟೆ ಮಾಡಿದ್ದಾನೆ. ಇದೇ ವೇಲೆ ಇಬ್ಬರ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಕೋಪದಲ್ಲಿ ಲಕ್ಷ್ಮೀ ನಾರಾಯಣ, ವೇಲ್​​ನಿಂದ ಲಲಿತಾಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಬಳಿಕ ಲಕ್ಷ್ಮೀ ನಾರಾಯಣ ಅದೇ ವೇಲ್​​ನಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇಂದು ಪಕ್ಕದ ಮನೆಯವರು ಗಮನಿಸಿದಾಗ ಇಬ್ಬರೂ ಸಾವನ್ನಪ್ಪಿರುವುದು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಸ್ಥಳಕ್ಕೆ ರಾಜಗೋಪಾಲನಗರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು. ಸದ್ಯ ಇಬ್ಬರ ಮೃತದೇಹಗಳುನ್ನು ವಿಕ್ಟೋರಿಯಾ ಅಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದ, ಈ ಬಗ್ಗೆ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *