ಚಿಕಿತ್ಸೆ ಕೊಡಿಸಲು ರಜೆ ಸಿಗದೇ ಮಗುವನ್ನೇ ಕಳೆದುಕೊಂಡ ಕಾನ್ಸ್ಟೇಬಲ್- ವಾಟ್ಸಾಪ್ ನಲ್ಲಿ ಅಳಲು

ಪೊಲೀಸ್ ಇಲಾಖೆ, ವೈದ್ಯಕೀಯ ಸೇವೆ, ಪತ್ರಿಕೋದ್ಯಮ ವೃತ್ತಿಯಲ್ಲಿರುವವರಿಗೆ ರಜೆ ಸಿಗುವುದು ತುಂಬಾ ಕಷ್ಟ. ಅದರಿಂದ ಕೆಲವರು ತಮ್ಮ ವಯಕ್ತಿಕ ಬದುಕನ್ನೇ ಹಾಳುಮಾಡಿಕೊಂಡಿದ್ದಾರೆ. ಇದೀಗ ರಜೆ ಸಿಗದಿದ್ದಕ್ಕೆನೇ ಪೊಲೀಸ್ ಪೇದೆಯೊಬ್ಬ ತಮ್ಮ ಮಗುವನ್ನೇ ಕಳೆದುಕೊಂಡಿದ್ದಾನೆ.
ವಿಜಯಪುರ: ಕೆಲವು ವೃತ್ತಿಗಳಲ್ಲಿ ರಜೆ ಸಿಗದೇ ಇರುವುದು ಸಾಕಷ್ಟು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಅದರಲ್ಲೂ ಪೊಲೀಸ್ ಇಲಾಖೆ, ವೈದ್ಯಕೀಯ ಸೇವೆ, ಪತ್ರಿಕೋದ್ಯಮ ವೃತ್ತಿಯಲ್ಲಿರುವವರಿಗೆ ರಜೆ ಸಿಗುವುದು ತುಂಬಾ ಕಷ್ಟ. ಅದರಿಂದ ಕೆಲವರು ತಮ್ಮ ವಯಕ್ತಿಕ ಬದುಕನ್ನೇ ಹಾಳುಮಾಡಿಕೊಂಡಿದ್ದಾರೆ. ಇದೀಗ ರಜೆ ಸಿಗದಿದ್ದಕ್ಕೆನೇ ಪೊಲೀಸ್ ಪೇದೆಯೊಬ್ಬ ತಮ್ಮ ಮಗುವನ್ನೇ ಕಳೆದುಕೊಂಡಿದ್ದಾನೆ.
ಮಗುವಿನ ಚಿಕಿತ್ಸೆಗೆ ರಜೆ ಸಿಗದೆ, ಕೊನೆಗೆ ಮಗುವನ್ನೇ ಕಳೆದುಕೊಂಡ ಕಾನ್ಸಸ್ಟೇಬಲ್
ಹೌದು, ಘಟನೆ ಎಂತವರ ಕಣ್ಣಲ್ಲೂ ನೀರು ತರಿಸುತ್ತದೆ. ವಿಜಯಪುರ ಜಿಲ್ಲಾ ಪೊಲೀಸ್ ಸಿಬ್ಬಂದಿಗಳ ಗ್ರೂಪ್ನಲ್ಲಿ ಕಾನ್ಸಸ್ಟೇಬಲ್ ಒಬ್ಬರು ತಮ್ಮ ಮಗುವಿನ ಬಗ್ಗೆ ಬೇಸರದ ಸಂದೇಶವನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗುವಿನ ಚಿಕಿತ್ಸೆಗೆ ರಜೆ ಸಿಗದೆ, ಕೊನೆಗೆ ಮಗುವನ್ನೇ ಕಳೆದುಕೊಂಡಿದ್ದಾರೆ.