Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೀದರ್‌ನಲ್ಲಿ ಭೀಕರ ದರೋಡೆ: ಚಲಿಸುತ್ತಿದ್ದ ಕಾರು ಪಂಚರ್ ಮಾಡಿ 23 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ದರೋಡೆಕೋರರು!

Spread the love

ಬೀದರ್: ಬೆಂಗಳೂರು (Bengaluru) ದರೋಡೆ ಪ್ರಕರಣ ಬೆನ್ನಲ್ಲೇ ಬೀದರ್‌ನಲ್ಲಿ (Bidar) ದರೋಡೆಯೊಂದು ನಡೆದಿದೆ. ಚಲಿಸುತ್ತಿದ್ದ ಕಾರನ್ನು ಪಂಚರ್ ಮಾಡಿ, 23 ಲಕ್ಷಕ್ಕೂ ಅಧಿಕ ಚಿನ್ನಾಭರಣ ದೋಚಿ ದರೋಡೆಕೋರರು ಪರಾರಿಯಾಗಿದ್ದಾರೆ.

ಹೈದ್ರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ (ನ.20) ಬೆಳಿಗ್ಗೆ 5ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಪ್ರವೀಣ್ ಜರಗ ಎಂಬುವವರು ಕಾರಿನಲ್ಲಿ ಮಹಾರಾಷ್ಟ್ರದ ಯೇಥಗಾಂವ್‌ನಿಂದ ಹೈದ್ರಾಬಾದ್‌ನಲ್ಲಿ ನಡೆಯುತ್ತಿದ್ದ ಮದುವೆ ರಿಶಪ್ಶನ್‌ಗೆ ಹೊರಟಿದ್ದರು. ಈ ವೇಳೆ ಬಸವಕಲ್ಯಾಣದ ಸಸ್ತಾಪುರ ಗ್ರಾಮದ ಎನ್‌ಹೆಚ್-65ರಲ್ಲಿ ಹಾದು ಹೋಗುವಾಗ ಚೂಪಾದ ವಸ್ತು ಎಸೆದು ದರೋಡೆಕೋರರು ಕಾರಿನ ಟೈರ್ ಪಂಚರ್ ಮಾಡಿದ್ದಾರೆ

ಟೈರ್ ಪಂಚರ್ ಆಗುತ್ತಿದ್ದಂತೆ 5ರಿಂದ 6 ಜನರು ಆಗಮಿಸಿ, ಕಾರನ್ನು ಸುತ್ತುವರೆದಿದ್ದಾರೆ. ಚಾಕು ತೋರಿಸಿ ಬೆದರಿಕೆ ಹಾಕಿ, ಸುಮಾರು 1.60 ಲಕ್ಷ ರೂ. ನಗದು, 223 ಗ್ರಾಂ ಬಂಗಾರ ಸೇರಿ 23.90 ಲಕ್ಷ ರೂ. ಅಧಿಕ ಮೌಲ್ಯದ ಚಿನ್ನಾಭರಣ ದರೋಡೆ ಮಾಡಿ, ಎಸ್ಕೇಪ್ ಆಗಿದ್ದಾರೆ.

ಈ ಸಂಬಂಧ ಪ್ರವೀಣ್ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ


Spread the love
Share:

administrator

Leave a Reply

Your email address will not be published. Required fields are marked *