Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಿರತೆ ದಾಳಿಗೆ 5 ವರ್ಷದ ಬಾಲಕಿ ಸಾವು: ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನವಿಲೇಕಲ್ ಗುಡ್ಡದಲ್ಲಿ ದುರಂತ!

Spread the love

ಚಿಕ್ಕಮಗಳೂರು: ಚಿರತೆ (Leopard) ದಾಳಿಯಿಂದ 5 ವರ್ಷದ ಸಾವನ್ನಪ್ಪಿರುವುದು ಕಡೂರು (Kadur) ತಾಲೂಕಿನ ನವಿಲೇಕಲ್ ಗುಡ್ಡದಲ್ಲಿ ನಡೆದಿದೆ.

ಚಿರತೆ ದಾಳಿಯಿಂದ ಸಾವನ್ನಪ್ಪಿದ ಬಾಲಕಿಯನ್ನು ಸಾನ್ವಿ (5) ಎಂದು ಗುರುತಿಸಲಾಗಿದೆ. ಮನೆಯ ಹಿಂದೆ ಕೊಟ್ಟಿಗೆಯಲ್ಲಿ ಮಗುವಿನ ಮೇಲೆ ಚಿರತೆ ದಾಳಿ ಮಾಡಿದೆ. ಈ ವೇಳೆ ಮಗು ಚೀರಾಟ ಕೇಳಿ ಪೋಷಕರು ಬಂದಿದ್ದಾರೆ. ಅವರ ಎದರುರಲ್ಲೇ ಚಿರತೆ ಮಗುವನ್ನು ಕಾಡಿಗೆ ಹೊತ್ತೊಯ್ದಿದೆ.

ಸ್ಥಳಿಯರು ಹುಡುಕಾಡಿದಾಗ ಕಾಡಂಚಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ

ಚಿರತೆ ಹಾವಳಿಯಿಂದ ಹೊಲ, ಗದ್ದೆ, ತೋಟಗಳಿಗೆ ಕೆಲಸಕ್ಕೆ ಹೋಗುವ ಕೂಲಿ ಕಾರ್ಮಿಕರು, ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ಆತಂಕದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕು. ಮಗುವಿನ ಸಾವಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *