ತೆಳ್ಳಾರು ಬಳಿಯ ಮನೆಯಲ್ಲಿ ಜಿಂಕೆ ಮಾಂಸ ವಶ

ಕಾರ್ಕಳ: ಅಕ್ರಮ ಗೋ ಹತ್ಯೆ ಪ್ರಕರಣ ಕುರಿತಂತೆ ತನಿಖೆ ವೇಳೆ ದುರ್ಗ ಗ್ರಾಮ ತೆಳ್ಳಾರು ಬಳಿಯ ಮನೆಯೊಂದರಲ್ಲಿ ಜಿಂಕೆ ಮಾಂಸ ಪತ್ತೆಯಾದ ಘಟನೆ ನಡೆದಿದೆ.

ಗೋಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ತೆಳ್ಳಾರು ಬಳಿಯ ಮನೆಯೊಂದರಲ್ಲಿ 17 ಕೆಜಿ ಜಿಂಕೆ ಮಾಂಸ ಪತ್ತೆಯಾಗಿದೆ. ಈ ಪ್ರಕರಣ ಸಂಬಂಧ ಶುಕೂರ್ ಎಂಬಾತನನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಇಬ್ಬರು ಪರಾರಿಯಾಗಿದ್ದಾರೆ. ಪರಾರಿಯಾದವರು ಶುಕೂರ್ ಅವರ ಮಕ್ಕಳಾದ ಸಾದತ್ ಮತ್ತು ಸಫತ್ ಎಂದು ಗುರುತಿಸಲಾಗಿದ್ದು, ಇವರು ವೃತ್ತಿಪರ ದನಕಳ್ಳರಾಗಿದ್ದು, ಸಾದತ್ ಹಾಗೂ ಆತನ ತಮ್ಮ ಸಫತ್ ಮೇಲೆ ಹಲವಾರು ದನಕಳ್ಳತನ ಪ್ರಕರಣ ದಾಖಲಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಅರಣ್ಯ ಇಲಾಖೆಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಮುಂದಿನ ತನಿಖೆ ಅರಣ್ಯ ಇಲಾಖೆಯವರು ವಹಿಸಲಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ