Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಮರಾವತಿಯಲ್ಲಿ ವೇದಿಕೆ ಮೇಲೆ ವರನ ಮೇಲೆ ದಾಳಿ; ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ಆರೋಪಿಯ ದೃಶ್ಯ ಸೆರೆಹಿಡಿದ ಡ್ರೋನ್ ವಿಡಿಯೋಗ್ರಾಫರ್!

Spread the love

ಮುಂಬೈ: ಮದುವೆ ಮಂಟಪದಲ್ಲಿ ವರನಿಗೆ ಚಾಕುವಿನಿಂದ ಇರಿದು ಎಸ್ಕೇಪ್‌ ಆಗುತ್ತಿದ್ದ ವ್ಯಕ್ತಿಯನ್ನು ವೆಡ್ಡಿಂಗ್‌ ಡ್ರೋನ್‌ 2 ಕಿ.ಮೀ ವರೆಗೆ ಬೆನ್ನಟ್ಟಿದ ಪ್ರಸಂಗ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.

ಮಹಾರಾಷ್ಟ್ರದ ಅಮರಾವತಿಯಲ್ಲಿ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ರಾಘೋ ಜಿತೇಂದ್ರ ಬಕ್ಷಿ ಎಂಬಾತ ವೇದಿಕೆಯ ಮೇಲೆ ವರನಿಗೆ ಮೂರು ಬಾರಿ ಇರಿದು ನಂತರ ಪರಾರಿಯಾಗಿದ್ದಾನೆ.

ವೆಡ್ಡಿಂಗ್‌ ಚಿತ್ರೀಕರಿಸುತ್ತಿದ್ದ ವಿಡಿಯೋಗ್ರಾಫರ್ ತಕ್ಷಣವೇ ಕಾರ್ಯಪ್ರವೃತ್ತನಾಗಿ ತನ್ನ ಡ್ರೋನ್ ಮೂಲಕ ದಾಳಿಕೋರನನ್ನು ಬೆನ್ನಟ್ಟಿದ. ದಾಳಿಕೋರ ಮತ್ತು ಇನ್ನೊಬ್ಬ ವ್ಯಕ್ತಿ ಬೈಕ್‌ನಲ್ಲಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಗ ಸುಮಾರು 2 ಕಿಮೀ ವರೆಗೆ ಡ್ರೋನ್‌ ಮೂಲಕ ಬೆನ್ನಟ್ಟಲಾಯಿತು.

ಪೊಲೀಸರು ಡ್ರೋನ್ ದೃಶ್ಯಾವಳಿಗಳನ್ನು ಪಡೆದು ಆರೋಪಿಗಳ ಗುರುತು ಪತ್ತೆಗೆ ಮುಂದಾಗಿದ್ದಾರೆ. ಡಿಜೆ ನೃತ್ಯದ ಸಮಯದಲ್ಲಿ ನಡೆದ ಸಣ್ಣ ಜಗಳದಲ್ಲಿ ಈ ದಾಳಿ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಗಾಯಗೊಂಡಿರುವ ವರ ಸಜಲ್ ರಾಮ್ ಸಮುದ್ರ (22) ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. 


Spread the love
Share:

administrator

Leave a Reply

Your email address will not be published. Required fields are marked *