ಯುರೋಪ್ನ ನರೋತ್ತಮ್, ಫ್ರಾನ್ಸ್ನ ಜಾನ್ನವ್: ಕೊಲ್ಲೂರು ಮೂಕಾಂಬಿಕಾ ಸನ್ನಿಧಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿದೇಶಿ ಜೋಡಿಯ ವಿವಾಹ

ಕೊಲ್ಲೂರು: ಯುರೋಪ್ ದೇಶದ ನರೋತ್ತಮ್ ದಾಸ್ ಮತ್ತು ಫ್ರಾನ್ಸ್ ನ ಜಾನ್ನವ್ ಭಾರತದ ಆಧ್ಯಾತ್ಮಕ್ಕೆ ಮನೋಸೋತ ವಿದೇಶಿ ಪ್ರಜೆಗಳು. ಕಳೆದ ಹಲವಾರು ವರ್ಷಗಳಿಂದ ಶ್ರೀ ಕೃಷ್ಣ ದೇವರ ಭಕ್ತರಾಗಿರುವ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು.

ದೇಶದ ಹಲವಾರು ಧಾರ್ಮಿಕ ಕೇಂದ್ರಗಳನ್ನು ಭೇಟಿ ಮಾಡಿರುವ ಈ ಜೋಡಿ, ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ನಿರ್ಧರಿಸಿತು.ಇದೀಗ ಕೊಲ್ಲೂರು ಮೂಕಾಂಬಿಕಾ ದೇವರ ಸನ್ನಿಧಾನದಲ್ಲಿ ಇಬ್ಬರು ಸತಿಪತಿಗಳಾಗಿದ್ದಾರೆ. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಸರಳ ಆರತಕ್ಷತೆ ನಡೆಸಿ, ಸಂಗೀತ ಕಾರ್ಯಕ್ರಮವನ್ನೂ ಈ ಜೋಡಿ ಆಯೋಜಿಸಿತ್ತು.ತಮ್ಮ ವೃತ್ತಿಯನ್ನು ತೊರೆದು ಮಥುರಾದ ಬೃಂದಾವನದಲ್ಲಿ ಇಬ್ಬರೂ ಶ್ರೀ ಕೃಷ್ಣದೇವರ ಸೇವೆಯನ್ನು ಮಾಡುತ್ತಿದ್ದಾರೆ.