ಮನೆ ಕಳ್ಳನಿಗೆ ಖೆಡ್ಡಾ ತೋಡಿ ರೆಡ್ ಹ್ಯಾಂಡಾಗಿ ಹಿಡಿದರು

ಬೆಳ್ತಂಗಡಿ :ಮಾಲಾಡಿ ಗ್ರಾಮದಲ್ಲಿ ವಿದೇಶದಲ್ಲಿ ನೆಲೆಸಿರುವ ಪ್ರೇಮಾ ಶೆಟ್ಟಿ ಎಂಬುವರಿಗೆ ಸೇರಿದ ಮನೆಯಿದೆ. ಮನೆಯಲ್ಲಿ ಯಾರೂ ವಾಸವಿಲ್ಲದಿದ್ದರೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು.

ಭಾನುವಾರ ಬೆಳಿಗ್ಗೆ ಆರೋಪಿ ಕಿರಣ್ ಕಳ್ಳತನದ ಉದ್ದೇಶದಿಂದ ಮನೆಗೆ ಬಂದಿದ್ದು, ಆತ ಮನೆಯ ಪರಿಸರದಲ್ಲಿ ಓಡಾಡುತ್ತಿದ್ದ ದೃಶ್ಯವನ್ನು ವಿದೇಶದಲ್ಲಿರುವ ಪ್ರೇಮಾ ಶೆಟ್ಟಿ ಅವರ ಮಗಳು ಮೊಬೈಲ್‌ನಲ್ಲಿ ವೀಕ್ಷಿಸಿದ್ದಾರೆ.
ತಕ್ಷಣ ಅವರು ಸ್ಥಳೀಯ ನಿವಾಸಿ ಪ್ರಕಾಶ್ ಶೆಟ್ಟಿ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಪ್ರಕಾಶ್ ಶೆಟ್ಟಿ ಅವರು ಮನೆ ಬಳಿ ಹೋಗಿ ನೋಡಿದಾಗ, ಅಪರಿಚಿತ ವ್ಯಕ್ತಿಯೊಬ್ಬ ಕಬ್ಬಿಣದ ರಾಡ್ ಹಿಡಿದು ಮನೆಯ ಚಾವಣಿ (roof) ಮೇಲೆ ನಿಂತಿದ್ದ.
ಪ್ರಕಾಶ್ ಶೆಟ್ಟಿ ಅವರನ್ನು ನೋಡಿದ ಕೂಡಲೇ ಆರೋಪಿ ಚಾವಣಿಯಿಂದ ಕೆಳಗೆ ಹಾರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಪ್ರಕಾಶ್ ಶೆಟ್ಟಿ ಅವರು ಹಿಡಿಯಲು ಪ್ರಯತ್ನಿಸಿದಾಗ, ಆರೋಪಿ ಕೈಯಲ್ಲಿದ್ದ ರಾಡಿನಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾನೆ.
ಬಳಿಕ ಸ್ಥಳೀಯ ನಿವಾಸಿಗಳು ಒಟ್ಟಾಗಿ ಸೇರಿ ಆ ವ್ಯಕ್ತಿಯನ್ನು ಹಿಡಿದು ಪೂಂಜಾಲಕಟ್ಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.