Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಯುವ ಕಾಂಗ್ರೆಸ್ ನಾಯಕಿಗೆ ಅಶ್ಲೀಲ ಸನ್ನೆ – ಕಾರು ಚಾಲಕನ ಬಂಧನ

Spread the love

ಬೆಂಗಳೂರು : ಟ್ರಾಫಿಕ್ ರೂಲ್ಸ್ ಬ್ರೇಕ್​ ಮಾಡಿದ್ದನ್ನ ಪ್ರಶ್ನಿಸಿದ್ದಕ್ಕೆ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗೆ ಅಶ್ಲೀಲ ಸನ್ನೆ ತೋರಿಸಿದ ಕಾರು ಚಾಲಕನನ್ನ ಚಾಮರಾಜಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.


ನಿನ್ನೆ ಸಂಜೆ ಮೈಸೂರು ರಸ್ತೆ ಗೋಪಾಲನ್ ಮಾಲ್ ಬಳಿ ಈ ಘಟನೆ ನಡೆದಿದ್ದು, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಕ್ಷತಾ ರವಿಕುಮಾರ್ ಅವರಿಗೆ ಕಾರು ಚಾಲಕನೋರ್ವ ಅಶ್ಲೀಲವಾಗಿ ಸನ್ನೆ ಮಾಡಿದ್ದಾನೆ.


ಯೂಟರ್ನ್ ನಿಷೇಧವಿದ್ರೂ ಚಾಲಕ ಕಾರನ್ನು ಯೂಟರ್ನ್‌ ತೆಗೆದುಕೊಂಡಿದ್ದಲ್ಲದೇ, ಬಳಿಕ ಸಿಗ್ನಲ್​ನ್ನು ಕೂಡ . ಹಾಗಾಗಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಕಾರು ಚಾಲಕನನ್ನು ಅಕ್ಷತಾ ರವಿಕುಮಾರ್ ಪ್ರಶ್ನಿಸಿದ್ದಾರೆ. ಈ ವೇಳೆ ಆತ ಕೈ ಬೆರಳಿನಿಂದ ಅಶ್ಲೀಲವಾಗಿ ಸನ್ನೆ ಮಾಡಿ ಅಸಭ್ಯ ವರ್ತನೆ ತೋರಿದ್ದಾನೆ.
ಈ ಬಗ್ಗೆ ಟ್ಟೀಟರ್​ನಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದ ಅಕ್ಷತಾ, ಪೊಲೀಸರನ್ನು ಟ್ಯಾಗ್​ ಮಾಡಿದ್ದರು. ಸದ್ಯ ಕಾರ್ ನಂಬರ್ ಆಧರಿಸಿ ಚಾಲಕನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *