ಆಹ್ವಾನ ಪತ್ರಿಕೆ’ ಕೊಡುವ ನೆಪದಲ್ಲಿ ಮನೆಗೆ ನುಗ್ಗಿದ ದಂಪತಿ; ಮಹಿಳೆಯನ್ನು ಕಟ್ಟಿಹಾಕಿ 200 ಗ್ರಾಂ ಚಿನ್ನಾಭರಣ ದೋಚಿ ಪರಾರಿ!

ಆನೇಕಲ್ : ಬೆಂಗಳೂರಿನಲ್ಲಿ ಆಹ್ವಾನ ಪತ್ರಿಕೆ ಕೊಡುವ ನೆಪದಲ್ಲಿ ಮನೆಗೆ ನುಗ್ಗಿ ಚಿನ್ನಾಭರಣ ದೋಚಿ ದಂಪತಿ ಪರಾರಿಯಾಗಿರುವ ಘಟನೆ ನಡೆದಿದೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ನೆರಳೂರು ಗ್ರಾಮದಲ್ಲಿ ನಡೆದಿದೆ. ನೆರಳೂರು ಗ್ರಾಮದ ವಾಸಿ ರವಿಕುಮಾರ್ ಮನೆಯಲ್ಲಿ ಖತರ್ನಾಕ್ ದಂಪತಿಯಿಂದ ಈ ದರೋಡೆ ನಡೆದಿದೆ. ರವಿಕುಮಾರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಎಂದಿನಂತೆ ಬುಧವಾರ ಸಹ ಕೆಲಸಕ್ಕೆ ಎಂದು ಹೋಗಿದ್ದಾಗ ಮನೆಯಲ್ಲಿ ರವಿಕುಮಾರ್ ಪತ್ನಿ ನಾಗವೇಣಿ ಒಬ್ಬರೆ ಇದ್ದರು. ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿದ ಖತರ್ನಾಕ್ ಜೋಡಿ ಇನ್ವಿಟೇಶನ್ ಕಾರ್ಡ್ ಕೊಡುವ ನೆಪದಲ್ಲಿ ಮನೆ ಒಳಗೆ ಬಂದು ಕುಡಿಯಲು ನೀರು ಕೇಳಿದ್ದಾರೆ.
ನೀರು ತರಲೆಂದು ಅಡುಗೆ ಮನೆಗೆ ಹೋದ ನಾಗವೇಣಿಯನ್ನು ಪುರುಷ ಕೈಕಾಲು ಕಟ್ಟಿ ಹಾಕಿ ಕೂಡಿ ಬೀರುವಿನ ಲಾಕರ್ ಕೀ ಪಡೆದು ಸುಮಾರು 200 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.