ಜಿಎಸ್ಟಿ ಇಳಿಕೆ ಸಂಭ್ರಮಕ್ಕೆ ಶಾಕ್: ನಂದಿನಿ ತುಪ್ಪದ ದರ ಏಕಾಏಕಿ ಕೆಜಿಗೆ ₹90 ಹೆಚ್ಚಳ! ಇಂದಿನಿಂದಲೇ ಹೊಸ ದರ ಜಾರಿ

ಬೆಂಗಳೂರು: ಜಿಎಸ್ಟಿ (GST) ದರ ಇಳಿಕೆ ಸಂಭ್ರಮದಲ್ಲಿದ್ದ ಜನತೆಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (KMF) ಶಾಕ್ ಕೊಟ್ಟಿದೆ. ನಂದಿನ ತುಪ್ಪದ ಏಕಾಏಕಿ 90 ರೂ. ಏರಿಕೆ ಮಾಡಿದೆ.

ಹೌದು. ನಂದಿನಿ ತುಪ್ಪದ (Nandini Ghee) ದರ ಪ್ರತಿ ಕೆಜಿಗೆ 90 ರೂ. ಏರಿಕೆ ಮಾಡಿ ಆದೇಶ ಹೊರಡಿಸಿದ್ದು, ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ತಿಳಿಸಿದೆ.
ಈ ಹಿಂದೆ 1 ಕೆಜಿ ತುಪ್ಪಕ್ಕೆ 610 ರೂ. ಇತ್ತು, ಸದ್ಯ 90 ರೂ. ಏರಿಕೆಯಿಂದ 700 ರೂ.ಗೆ ಏರಿಕೆಯಾಗಿದೆ.
ತುಪ್ಪ ಹೊರತುಪಡಿಸಿ ಇತರೇ ನಂದಿನಿ ಉತ್ಪನ್ನಗಳಲ್ಲಿ ಯಾವುದೇ ಬದಲಾವಣೆ ಇಲ್ಲ