ರೈಲು ಹಳಿ ಕೆಳಗೆ ಸಿಲುಕಿದ ಬೈಕ್ ಸವಾರ : ಬೀದರ್ ನಲ್ಲಿ ತಪ್ಪಿದ ಭಾರಿ ಅನಾಹುತ!

ಬೀದರ್ : ಸಾಮಾನ್ಯವಾಗಿ ರೈಲು ಹಳಿ ದಾಟುವಾಗ ರೈಲು ಬರುತ್ತಿದ್ದಂತೆ ಗೇಟ್ ಹಾಕುತ್ತಾರೆ. ಆದರೂ ಕೂಡ ಕೆಲವರು ಹುಂಬತನದಿಂದ ರೈಲು ಹಳಿ ದಾಟಲು ಪ್ರಯತ್ನಿಸಿ ಪ್ರಾಣ ಕಳೆದುಕೊಂಡಿರುವ ಅದೆಷ್ಟೋ ಉದಾಹರಣೆಗಳಿವೆ. ಇದೀಗ ಬೀದರ್ನಲ್ಲಿ ಇದೇ ರೀತಿ ಒಂದು ಘಟನೆ ನಡೆದಿದ್ದು, ಬೈಕ್ ಸವಾರ ರೈಲು ಹಳಿ ದಾಟಲು ಯತ್ನಿಸಿದ್ದಾನೆ. ಆದರೆ ಬೈಕ್ ಸವಾರ ಅದೃಷ್ಟವಶಾತ್ ಪ್ರಣಾಪಾಯದಿಂದ ಪರ ಆಗಿರುವ ಘಟನೆ ಬೀದರ್ ನೌಬಾದ್ ರೈಲು ಹಳಿ ಬಳಿ ಈ ಒಂದು ಘಟನೆ ಸಂಭವಿಸಿದೆ.

ಹೌದು ಬೀದರ್ನಲ್ಲಿ ಬೈಕಿನಲ್ಲಿ ರೈಲ್ವೆ ಹಳಿ ದಾಟವಾಗ ಭಾರಿ ಅನಾಹುತ ಒಂದು ತಪ್ಪಿದೆ. ರೈಲಿನ ಕೆಳಗೆ ಬೈಕ್ ಸವಾರ ಸಿಲುಕಿಕೊಂಡು ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾನೆ. ರೈಲು ಬರುತ್ತಿದ್ದಂತೆ ಬೈಕ್ ಬಿಟ್ಟು ಸವಾರ ಜೀವ ಉಳಿಸಿಕೊಂಡಿದ್ದಾನೆ. ರೈಲ್ವೆ ಹಳಿಯ ಮೇಲೆ ಬೈಕ್ ಬಿಟ್ಟು ವ್ಯಕ್ತಿ ಪರಾರಿಯಾಗಿದ್ದಾನೆ. ಬೀದರ್ ನಗರದ ನೌಬಾದ್ ಬಳಿ ಈ ಒಂದು ಘಟನೆ ಸಂಭವಿಸಿದೆ.