ಜುನಾಗಢದಲ್ಲಿ ಭಯಾನಕ ಜೋಡಿ ಕೊಲೆ: ಹದಿನೈದು ದಿನಗಳ ನಂತರ ಬಯಲಾದ ಗರ್ಭಿಣಿ ಅತ್ತಿಗೆ ಮತ್ತು ಅಣ್ಣನ ಹತ್ಯೆ ರಹಸ್ಯ.

ಜುನಾಗಢ: ಗುಜರಾತ್ನ ಜುನಾಗಢದಲ್ಲಿ ಭಯಾನಕ ಘಟನೆ ವರದಿಯಾಗಿದೆ. 15 ವರ್ಷದ ಬಾಲಕನೊಬ್ಬ ಅಣ್ಣನನ್ನು ಕೊಂದು, ಗರ್ಭಿಣಿ ಅತ್ತಿಗೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿದೆ. ಅಕ್ಟೋಬರ್ 16ರಂದು ಈ ಜೋಡಿ ಕೊಲೆ(Murder) ನಡೆದಿದೆ. ಸುಮಾರು ಎರಡು ವಾರಗಳ ನಂತರ ಬಿಹಾರದಲ್ಲಿರುವ ಮಹಿಳೆಯ ಕುಟುಂಬವು ಅನುಮಾನ ವ್ಯಕ್ತಪಡಿಸಿದ ನಂತರ ಬೆಳಕಿಗೆ ಬಂದಿದೆ.

ಆರೋಪಿ ತನ್ನ ಅಣ್ಣನ ನಡುವೆ ಜಗಳ ಮಾಡಿದ್ದ, ಕೋಪದಲ್ಲಿ ಅಣ್ಣನ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಹಲ್ಲೆ ನಡೆಸಿದ್ದಾನೆ. ಆತ ಕುಸಿದುಬಿದ್ದ ಬಳಿಕ, ಅತ್ತಿಗೆಯ ಮೇಲೆ ಹಲ್ಲೆ ನಡೆಸಿ ಅತ್ಯಾಚಾರವೆಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಾಲಕ ಅಣ್ಣನಿಗೆ ಪದೇ ಪದೇ ಹೊಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ತಾನು ಗರ್ಭಿಣಿ ದಯವಿಟ್ಟು ಈ ಮಗುವಿಗಾಗಿಯಾದರೂ ತನ್ನನ್ನು ಬಿಟ್ಟುಬಿಡು ಎಂದು ಆಕೆ ಹೇಳಿದ್ದಕ್ಕೆ, ತನ್ನ ಜತೆ ಲೈಂಗಿಕ ಸಂಪರ್ಕ ಹೊಂದಿದರೆ ಬಿಡುತ್ತೇನೆ ಎಂದು ಒತ್ತಾಯಿಸಿದ್ದಾನೆ. ಆಕೆಯ ಮೇಲೆ ಅತ್ಯಾಚಾರ ನಡೆದ ಬಳಿಕ ಆಕೆ ಕಿರುಚುತ್ತಾ ಓಡಿ ಹೋಗಿದ್ದಾಳೆ.
ಆಕೆಯ ಹೊಟ್ಟೆಯ ಭಾಗಕ್ಕೆ ಮೊಣಕಾಲನ್ನು ಊರಿ, ನಂತರ ಕತ್ತು ಹಿಸುಕಿ ಆಕೆಯನ್ನು ಹತ್ಯೆ ಮಾಡಿದ್ದಾನೆ. ನಂತರ ಬಾಲಕ ಎರಡೂ ಶವಗಳನ್ನು ಮನೆಯ ಹಿಂಭಾಗದ ಐದು ಅಡಿ ಆಳದ ಗುಂಡಿಯಲ್ಲಿ ಹೂತು, ಬಟ್ಟೆಗಳನ್ನು ಸುಟ್ಟು, ರಕ್ತದ ಕಲೆಗಳನ್ನು ಒರೆಸಿದ್ದಾನೆ ಎಂದು ಅಧಿಕಾರಿ ಹೇಳಿದ್ದಾರೆ.
ಘಟನೆಯ ಸಮಯದಲ್ಲಿ ಮನೆಯಲ್ಲಿದ್ದ ತಾಯಿ ಸಾಕ್ಷ್ಯಗಳನ್ನು ನಾಶಮಾಡಲು ಸಹಾಯ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದಾಘಿ ಆರೋಪಿಯ ಅಣ್ಣನ ಕುತ್ತಿಗೆಯೇ ಮುರಿದುಹೋಗಿತ್ತು. ಮಹಿಳೆಯ ಅರ್ಧ ಬೆಳೆದ ಭ್ರೂಣವನ್ನು ಹೊರಹಾಕಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪಾವಳಿಯ ಸಮಯದಲ್ಲಿ ಮಹಿಳೆಯನ್ನು ಸಂಪರ್ಕಿಸಲು ಪದೇ ಪದೇ ಪ್ರಯತ್ನಿಸಿದರೂ ಉತ್ತರಿಸಲಿಲ್ಲ, ನಂತರ ಆಕೆಯ ಕುಟುಂಬದವರಿಗೆ ಅನುಮಾನ ಬಂದಿತ್ತು. ಹಿಮತ್‌ನಗರ ಬಳಿ ರಸ್ತೆ ಅಪಘಾತದಲ್ಲಿ ದಂಪತಿಗಳು ಸಾವನ್ನಪ್ಪಿದ್ದಾರೆ ಎಂದು ತಾಯಿ ಅವರಿಗೆ ತಿಳಿಸಿದರೂ, ಯಾವುದೇ ಸಾಕ್ಷಿ ಸಿಗಲಿಲ್ಲ.ಬಳಿಕ ಆಕೆಯ ಕುಟುಂಬದವರು ಪೊಲೀಸರನ್ನು ಭೇಟಿಯಾದರು.ಬಾಲಕ ಕೊಲೆಯನ್ನು ಒಪ್ಪಿಕೊಂಡಿದ್ದಾನೆ ಹಾಗೂ ಸಮಾಧಿ ಸ್ಥಳಕ್ಕೆ ಕರೆದೊಯ್ದಿದ್ದಾನೆ.
ನಂತರ ಅವಶೇಷಗಳನ್ನು ಹೊರತೆಗೆಯಲಾಯಿತು.ಈ ಕುಟುಂಬವು ಸುಮಾರು 40 ವರ್ಷಗಳ ಹಿಂದೆ ಬಿಹಾರದಿಂದ ವಲಸೆ ಬಂದಿತ್ತು. ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ನಿಧನರಾದ ತಂದೆ ದೇವಸ್ಥಾನದ ಅರ್ಚಕರಾಗಿ ಕೆಲಸ ಮಾಡುತ್ತಿದ್ದರು. ಅಣ್ಣ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು, ಆದರೆ ಆರೋಪಿ ದನಗಳನ್ನು ನಿರ್ವಹಿಸಲು ಸಹಾಯ ಮಾಡುತ್ತಿದ್ದ.