ಮುಲ್ಕಿ ಎಸ್ ಕೋಡಿ ಬಳಿ ಭೀಕರ ಅಪಘಾತ: ಸ್ಕೂಟರ್ಗೆ ಕಾರು ಡಿಕ್ಕಿ; ಗಂಭೀರ ಗಾಯಗೊಂಡಿದ್ದ ಸಹಸವಾರ ಸುರೇಂದ್ರ ಸಾವು.

ಮುಲ್ಕಿ: ಇಲ್ಲಿಗೆ ಸಮೀಪದ ಎಸ್ ಕೋಡಿ ಯಲ್ಲಿ ನಡೆದ ಸ್ಕೂಟರ್ ಮತ್ತು ಕಾರು ನಡುವಿನ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸಹಸವಾರ ಪುನರೂರು ನಿವಾಸಿ ಸುರೇಂದ್ರ(38) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ
ತೀರಾ ಹಿಂದುಳಿದ ಬಡ ಕುಟುಂಬದಲ್ಲಿ ವಾಸವಾಗಿರುವ ಮೃತ ಸುರೇಂದ್ರ ವೃತ್ತಿಯಲ್ಲಿ ಚಾಲಕರಾಗಿದ್ದು ಅವಿವಾಹಿತರಾಗಿದ್ದಾರೆ.
ಅವರ ತಂದೆ ಕೂಡ ಅನಾರೋಗ್ಯ ಪೀಡಿತರಾಗಿದ್ದು ಮೂವರು ತಂಗಿಯರನ್ನು ಸಾಕುವ ಜವಾಬ್ದಾರಿ ವಹಿಸಿಕೊಂಡಿದ್ದರು. ಸುರೇಂದ್ರ ರವರ ನಿಧನದಿಂದ ಅವರ ಮನೆಯಲ್ಲಿ ಶೋಕ ಮಡುಗಟ್ಟಿದ್ದು ಕುಟುಂಬದ ರೋಧನ ಮುಗಿಲು ಮುಟ್ಟಿದೆ.
ಮೃತ ಸುರೇಂದ್ರ ಪುನರೂರು ಪರಿಸರದ ವಿವಿಧ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪುನರೂರು ಬ್ರಹ್ಮಮುಗೇರ ದೈವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು
ಅಪಘಾತದಿಂದ ಆಸ್ಪತ್ರೆಗೆ ದಾಖಲಾಗಿರುವ ಸ್ಕೂಟರ್ ಸವಾರ ಲೋಲಾಕ್ಷ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಕಾರ್ ಚಾಲಕನ ನಿರ್ಲಕ್ಷ ಚಾಲನೆಯ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
