ರಾಹುಲ್ ಗಾಂಧಿಯೇ ಫೈನಲ್: ಪವರ್ ಶೇರಿಂಗ್ ಪ್ರಶ್ನೆಗೆ ಮೈಸೂರಲ್ಲಿ ಗುಡುಗಿದ ಸಿಎಂ ಸಿದ್ದರಾಮಯ್ಯ; ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಲ್?

ಮೈಸೂರು: ಈ ಸಲ ಕಡೇ ಆಟ. ಯಾವುದಾದರೂ ಒಂದು ಆಗ್ಲೇಬೇಕು. ಇದು ಕಾಂಗ್ರೆಸ್ (Congress) ಒಳಗಿನ ಸಿದ್ದು ಟೀಂ, ಡಿಕೆಶಿ ಟೀಂ ಕೂಗು. ಅದಕ್ಕೆ ಪೂರಕ ಎಂಬಂತೆ ಸಿದ್ದರಾಮಯ್ಯ (Siddaramaiah) ಕೂಡ ನವೆಂಬರ್ 15ರ ಬಳಿಕ ಹೊಸ ಆಟದ ಸಂದೇಶ ರವಾನಿಸಿದ್ದಾರೆ. ಮೈಸೂರಲ್ಲಿ ಗುಡುಗಿರುವ ಸಿದ್ದು ರಾಹುಲ್ ಫೈನಲ್ ಎಂಬ ಸುಳಿವು ನೀಡಿದ್ದಾರೆ.

ಪವರ್ ಶೇರ್ ಅಂದ್ರೆ ಸಾಕು ಸಿಎಂ ಸಿದ್ದರಾಮಯ್ಯ ಗುಟುರು ಹಾಕ್ತಿದ್ದಾರೆ. ಯಾರೇ ಕೂಗಾಡಲಿ, ಯಾರೇ ಹೋರಾಡಲಿ. ಹೈಕಮಾಂಡ್ ಹೇಳ್ಬೇಕು ಅಷ್ಟೇ ಅನ್ನೋದು ಸಿದ್ದರಾಮಯ್ಯ ಪಾಲಿನ ಬ್ರಹ್ಮಾಸ್ತ್ರ. ಪವರ್ ಶೇರ್ಗೆ ಸಿದ್ದರಾಮಯ್ಯ ಸಂಪುಟ ಪುನಾರಚನೆ ಗುನ್ನಾ ಕೊಡ್ತಿದ್ದಾರೆ
ಮೈಸೂರಲ್ಲಿ ಇವತ್ತು ಏರುಧ್ವನಿಯಲ್ಲೇ ಮಾತನಾಡಿ, ಹೈಕಮಾಂಡ್ ಅಂಗಳಕ್ಕೆ ಚೆಂಡು ಎಸೆದಿದ್ದಾರೆ. ಡಿಕೆಶಿ ಸಿಎಂ ಆಗ್ಬೇಕು ಎಂದು ಕೆಲವರು ಕೂಗ್ತಿದ್ದಾರೆ ಎಂಬ ಪ್ರಶ್ನೆಗೆ, ಏನ್ ಹೈಕಮಾಂಡ್ ಹೇಳಿದ್ಯಾ? ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರಾ? ಎಂದು ಖಾರವಾಗಿ ಪ್ರಶ್ನಿಸ್ತಿದ್ದಾರೆ. ಅಷ್ಟೇ ಅಲ್ಲ ನವೆಂಬರ್ 15ರ ಬಳಿಕ ಹೈಕಮಾಂಡ್ ನಾಯಕರನ್ನ ಭೇಟಿ ಮಾಡ್ತೀನಿ. ಸಂಪುಟ ಪುನಾರಚನೆಗೆ ರಾಹುಲ್ ಬಳಿ ಅನುಮತಿ ಕೇಳ್ತೀನಿ ಅಂತಾ ಗುಡುಗಿದ್ದಾರೆ.
ನವೆಂಬರ್ 15ರ ಬಳಿಕ ಸಂಪುಟ ಪುನಾರಚನೆ ಕ್ಲೈಮ್ ಜೋರಾಗಲಿದೆ. 15ಕ್ಕೂ ಹೆಚ್ಚು ಸಚಿವರು ಔಟ್ ಆಗುವ ಲಿಸ್ಟ್ ರೆಡಿ ಆಗ್ತಿದೆ. ಸಿದ್ದರಾಮಯ್ಯ ಅವರಿಂದ ಕ್ಯಾಸ್ಟ್ ಕಾಂಬಿನೇಶನ್ ಸಂಪುಟ ಪುನಾರಚನೆ ಕ್ಲೈಮ್ ಮಾಡಿ ಹೊಸ ಆಟಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಈ ನಡುವೆ ಸಿದ್ದರಾಮಯ್ಯ ಟೀಂನಿಂದ OM(Obc+Musilm) ರಿಪೋರ್ಟ್ ಹೈಕಮಾಂಡ್ಗೆ ಸಲ್ಲಿಕೆಗೂ ಪ್ಲ್ಯಾನ್ ನಡೆದಿದೆ. 224 ಕ್ಷೇತ್ರಗಳಲ್ಲಿ 147 ಕ್ಷೇತ್ರಗಳ ಪಟ್ಟಿ ಸಿದ್ಧಪಡಿಸಿದ ಸಿದ್ದು ಟೀಂ, ಒಬಿಸಿ+ಮುಸ್ಲಿಂ ಕಾಂಬಿನೇಶನ್ ನಿರ್ಣಾಯಕದ ಬಗ್ಗೆ ಸ್ಟಡಿ ರಿಪೋರ್ಟ್ ಇದೆ ಅಂತೆ. ನೀವು ಡಿಸೈಡ್ ಮಾಡೋದು ಮಾಡಿ, ನಮ್ಮ ವರದಿ ಒಮ್ಮೆ ನೋಡಿ ಅನ್ನೋದು ಟೀಂ ಸಿದ್ದು ವಾದ. ಇನ್ನು ಎಂದಿನಂತೆ ನಾಯಕತ್ವ ಬದಲಾವಣೆ ಬಗ್ಗೆ ನಮಗೇನೂ ಗೊತ್ತಿಲ್ಲ, ಸದ್ಯಕ್ಕೆ ಸಿದ್ದರಾಮಯ್ಯ ಸಿಎಂ ಅಂತಾ ಸಚಿವರ ಹೇಳಿಕೆ ಮುಂದುವರಿದಿದೆ.
ಒಟ್ನಲ್ಲಿ ಹೈಕಮಾಂಡ್ ಅನ್ನೋದಕ್ಕಿಂತ ರಾಹುಲ್ ಗಾಂಧಿ ಬಳಿಯೇ ಸಂಪುಟ ಕ್ಲೈಮ್ಗೆ ಮುಂದಾಗಿರುವ ಸಿದ್ದರಾಮಯ್ಯ ಒಳಮರ್ಮ ಏನು? ಮೈಸೂರಲ್ಲೇ ಸಿದ್ದರಾಮಯ್ಯ ಗುಡುಗಿದ್ದೇಕೆ? ಎಂಬುದಕ್ಕೆ ನವೆಂಬರ್ ಕಡೇ ವಾರದಲ್ಲಿ ಉತ್ತರ ಸಿಗುವ ಸಾಧ್ಯತೆಯಿದ್ದು, ಹೈಕಮಾಂಡ್ ಆಟ ಪುನಾರಚನೆಗೆ ಅನುಮತಿಯೋ? ಪವರ್ ಶೇರ್ಗಷ್ಟೇ ಮಾತುಕತೆಯೋ? ಎಂಬುದನ್ನ ಕಾದುನೋಡಬೇಕಿದೆ.