ಶಾರುಖ್ ಖಾನ್ 60ನೇ ಹುಟ್ಟುಹಬ್ಬ: ಈ ಬಾರಿ ‘ಮನ್ನತ್ ದರ್ಶನ’ ಮಿಸ್ ಆಗಿದ್ದೇಕೆ? ವಿಡಿಯೋ ಮೂಲಕ ಕಾರಣ ತಿಳಿಸಿದ ಕಿಂಗ್‌ಖಾನ್

ಕಿಂಗ್‌ಖಾನ್ ಶಾರುಖ್ ಖಾನ್ (Shah Rukh Khan) 60ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಪ್ರತಿ ವರ್ಷ ನವೆಂಬರ್ 2ರ ಹಿಂದಿನ ರಾತ್ರಿಯೇ ಅಭಿಮಾನಿಗಳು ಮನ್ನತ್ (Mannat) ನಿವಾಸದ ಬಳಿ ಜಮಾಯಿಸುತ್ತಿದ್ದರು. ಮನ್ನತ್ ಬಾಲ್ಕನಿಯಿಂದ ಪ್ರತಿವರ್ಷ ಅಭಿಮಾನಿಗಳಿಗೆ ದರ್ಶನ ಕೊಡುತ್ತಿದ್ದ ಕಿಂಗ್‌ಖಾನ್, ಈ ಬಾರಿ ಮನೆ ಬಳಿ ಬರದಂತೆ ವಿಡಿಯೋ ಮೂಲಕ ಮನವಿ ಮಾಡಿದ್ದರು.

ಈ ಬಾರಿ ಮನೆ ಬಳಿ ಬರದಂತೆ ಅಭಿಮಾನಿಗಳಿ ಮನವಿ ಮಾಡಲು ಕಾರಣವೂ ಇದೆ. ಜನಸಂದಣಿ ನಿಯಂತ್ರಣ ಹಾಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನ ತಪ್ಪಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದ ಕಾರಣ ಮನ್ನತ್ ದರ್ಶನ ಕೊಟ್ಟಿಲ್ಲ ಶಾರುಖ್ ಖಾನ್. ಅಂದಹಾಗೆ ಅಭಿಮಾನಿಗಳ ವಿಶೇಷ ಮೀಟ್ ಮಾಡಿರುವ ಶಾರುಖ್ ಸೆಲ್ಫಿ ವಿಡಿಯೋ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಅಂದಹಾಗೆ ನಟ ಶಾರುಖ್ ಖಾನ್ ಈ ವರ್ಷ ಹುಟ್ಟುಹಬ್ಬದ ಸಂದರ್ಭದಲ್ಲಿ ಭೇಟಿಯಾಗೋಕೆ ಆಗದೇ ಇರುವ ಅಭಿಮಾನಿಗಳನ್ನ ಮುಂದಿನ ದಿನಗಳಲ್ಲಿ ಥಿಯೇಟರ್‌ಗಳಲ್ಲಿ, ಮುಂದಿನ ವರ್ಷ ಹುಟ್ಟುಹಬ್ಬದ ವೇಳೆ ಸಿಗುವುದಾಗಿ ಬರೆದುಕೊಂಡಿದ್ದಾರೆ. ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಕಿಂಗ್ ಸಿನಿಮಾದ ಟೈಟಲ್ ಟೀಸರ್ ರಿಲೀಸ್ ಆಗಿದ್ದು, ಮಾಸ್ ಆ್ಯಂಡ್ ರಗಡ್ ಲುಕ್‌ನಲ್ಲಿ ಕಿಂಗ್‌ಖಾನ್ ಕಾಣಿಸಿಕೊಂಡಿದ್ದಾರೆ.