ಬೆಂಗಳೂರು ಪೊಲೀಸ್ ದೌರ್ಜನ್ಯ: ಕಳ್ಳತನ ಆರೋಪದ ಮೇಲೆ ಬಂಗಾಳಿ ಮಹಿಳೆ ಖಾಸಗಿ ಅಂಗಗಳಿಗೆ ಹಲ್ಲೆ; ವರ್ತೂರು ಪೊಲೀಸರ ವಿರುದ್ಧ ಗಂಭೀರ ಆರೋಪ

ಬೆಂಗಳೂರು: ಮಹಿಳೆಯೊಬ್ಬರ (Bengali woman) ಖಾಸಗಿ ಅಂಗಗಳಿಗೆ ಒದ್ದು ಬೆಂಗಳೂರಿನ ವರ್ತೂರು ಪೊಲೀಸರು (Varthur Police) ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.

ಪಶ್ಚಿಮ ಬಂಗಾಳದ ಮಹಿಳೆ ಸುಂದರಿ ಬೀಬಿ (34) ಹಲ್ಲೆಗೊಳಗಾದ ಮಹಿಳೆ. ಬೇಬಿಯ ತಲೆ, ಬೆನ್ನು, ಕೈ- ಕಾಲು ಹಾಗೂ ಖಾಸಗಿ ಅಂಗಗಳ (Private Parts) ಮೇಲೆ ಮೇಲೆ ವರ್ತೂರು ಪೊಲೀಸರು ಹಲ್ಲೆ ಮಾಡಿದ್ದು, ರಕ್ತ ಹೆಪ್ಪುಗಟ್ಟಿ ನಡೆದಾಡೋಕೂ ಆಗದ ಪರಿಸ್ಥಿತಿಯಲ್ಲಿದ್ದಾರೆ.
ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ನಲ್ಲಿ ಸುಂದರಿ ಬೀಬಿ ಮನೆ ಕೆಲಸ ಮಾಡ್ತಿದ್ರು. ಮನೆಯಲ್ಲಿ ಹಣ ಬಿದ್ದಿರೋದು ತೆಗೆದುಕೊಂಡು ಮನೆ ಮಾಲೀಕರಿಗೆ ಕೊಡಲು ಹೋಗಿದ್ದಾರೆ. ಇದನ್ನ ಸಿಸಿಟಿವಿಯಲ್ಲಿ ಗಮನಿಸಿದ ಅಪಾರ್ಟ್ಮೆಂಟ್ ಫ್ಲ್ಯಾಟ್‌ನ ಮಾಲೀಕರು ಬೀಬಿ ಮೇಲೆ ಹಲ್ಲೆ ಮಾಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಠಾಣೆಯಲ್ಲಿ ಪೊಲೀಸರು ಮನಬಂದಂತೆ ಥಳಿಸಿದ್ದಾರೆಂದು ಆರೋಪಿಸಿದ್ದಾರೆ
ಘಟನೆಯ ಕುರಿತು ಹಲ್ಲೆಗೊಳಗಾದ ಕುಟುಂಬ, ಪ. ಬಂಗಾಳದ ರಾಜ್ಯಸಭಾ ಸದಸ್ಯ ಹಾಗೂ ಪ.ಬಂಗಾಳದ ವಲಸೆ ಕಾರ್ಮಿಕರ ಕಲ್ಯಾಣ ಮಂಡಳಿಯ ಅಧ್ಯಕ್ಷ ಸಮೀರ್ ಉಲ್‌ಗೆ ವಿಚಾರ ತಿಳಿಸಿದ್ದಾರೆ. ಕೂಡಲೇ ಪಶ್ಚಿಮ ಬಂಗಾಳದ ಸಿಎಂ ಕಚೇರಿಗೆ ಸಮೀರ್ ಉಲ್ ಬೆಂಗಳೂರು ಪೊಲೀಸರ ಕ್ರೌರ್ಯದ ವಿಷಯವನ್ನ ಮುಟ್ಟಿಸಿದ್ದಾರೆ. ಬೆಂಗಳೂರು ಪೊಲೀಸರ ಈ ವರ್ತನೆಗೆ ಪಶ್ಚಿಮ ಬಂಗಾಳದ ಸಿಎಂ ಕಚೇರಿ ಅಸಮಾಧಾನ ವ್ಯಕ್ತಪಡಿಸಿದೆ