ನೆಲಮಂಗಲ ದೇವಾಲಯದಲ್ಲಿ ದುರಂತ: ಆಂಜನೇಯ ಸ್ವಾಮಿ ದೇವಸ್ಥಾನದ ಗೇಟ್ ಬಿದ್ದು 11 ವರ್ಷದ ಬಾಲಕನ ಕಾಲು ಮುರಿತ

ನೆಲಮಂಗಲ: ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬಾಲಕ ಆಟವಾಡುವ ವೇಳೆ ದೇವಾಲಯದ ಗೇಟ್ ಬಿದ್ದು ಬಾಲಕನ ಕಾಲು ಮುರಿತವಾಗಿರುವ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ನೆಲಮಂಗಲ ಬಳಿಯ ಮಾಕಳಿಯ ಬೈಲಾಂಜನೇಯ ದೇವಾಲಯದಲ್ಲಿ ಘಟನೆ ನಡೆದಿದೆ. ಮುಜರಾಯಿ ಇಲಾಖೆಯ ಬೆಜವಬ್ದಾರಿತನಕ್ಕೆ ಲೋಹಿತ್ ನಾಯಕ್ ಎಂಬ 11 ವರ್ಷದ ಬಾಲಕನ ಕಾಲು ಮುರಿತವಾಗಿದೆ.
ದೇವಸ್ಥಾನದ ಗೇಟ್ ತೊಡೆಯ ಮೇಲೆ ಬಿದ್ದು ತೊಡೆಭಾಗದ ಮೂಳೆ ಮುರಿತ ಮುಜರಾಯಿ ಇಲಾಖೆಯ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಕುಮಾರ್ ನಾಯಕ್ ಹಾಗೂ ಭಾರತಿ ಬಾಯಿ ದಂಪತಿಯ ಮಗನಾಗಿರುವ ಲೋಹಿತ್ ನಾಯಕ್ ಅರಸೀಕೆರೆ ಮೂಲದ ದಂಪತಿಗಳು 13 ವರ್ಷಗಳಿಂದ ಮಾಕಳಿಯಲ್ಲಿ ವಾಸವಾಗಿದ್ದರು.
ಕ್ಯಾಬ್ ಚಾಲಕನಾಗಿರುವ ಬಾಲಕನ ತಂದೆ ನಿನ್ನೆ ನೆಲಮಂಗಲ ಬಳಿಯ ಮಾಕಳಿ ಬೈಲಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಮಗನನ್ನ ಕರೆದುಕೊಂಡು ಹೋಗಿದ್ದರು. ದೇಸ್ಥಾನದ ಬಳಿ ಆಟವಾಡಲು ಹೋಗಿದ್ದಾಗ ಘಟನೆ ನಡೆದಿದೆ. ಸದ್ಯ ಬಾಲಕ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ದೇವಸ್ಥಾನದ ಗೇಟ್ ತುಂಬಾ ಹಳೆಯದಾಗಿದ್ದರಿಂದ ಘಟನೆ ನಡೆದಿದೆ, ಇದು ಮುಜರಾಯಿ ಇಲಾಖೆಯ ನಿರ್ಲಕ್ಷ್ಯದಿಂದ ಆಗಿದೆ ಎಂದು ಜನ ಆಕ್ರೋಶ ಹೊರಹಾಕಿದ್ದಾರೆ.