ಮದುವೆ ಕೇಳಿದ ಪ್ರೇಯಸಿಯನ್ನು ಹತ್ಯೆ ಮಾಡಿ ಹೂತ ಪ್ರಿಯಕರ

ಚೆನ್ನೈ: ಇದೆಂಥಾ ಪ್ರೇತಿ, ಎಷ್ಟೋ ಮಂದಿ ಮನೆಯಲ್ಲಿ ಇಬ್ಬರ ಮದುವೆ ಒಪ್ಪಿಕೊಳ್ಳಲಿಲ್ಲವೆಂದು ಪ್ರಾಣಬಿಡುವವರನ್ನು ಕೇಳಿದ್ದೇವೆ. ಆದರೆ ಇಷ್ಟ ಪಟ್ಟವರು ಮದುವೆಯಾಗು ಎಂದು ಕೇಳಿದ್ದಕ್ಕೆ ಕೊಲೆ ಮಾಡಿರುವ ಹಲವು ನಿದರ್ಶನಗಳನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ. ಮದುವೆಯಾಗು ಎಂದಿದ್ದಕ್ಕೆ ಪ್ರಿಯಕರನೊಬ್ಬ ತನ್ನ ಪ್ರೇಯಸಿಯನ್ನು ಗುಂಡಿ ತೋಡಿ ಮುಚ್ಚಿರುವ ಘಟನೆ ತಮಿಳುನಾಡಿನ ಈರೋಡ್ನಲ್ಲಿ ನಡೆದಿದೆ.

ಈರೋಡ್ ಜಿಲ್ಲೆಯಲ್ಲಿರುವ ಬಾಳೆ ತೋಟವೊಂದರಲ್ಲಿ 35 ವರ್ಷದ ಮಹಿಳೆಯನ್ನು ಕೊಲೆ ಮಾಡಿ ಹೂತಿಟ್ಟಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ತನಿಖಾಧಿಕಾರಿಗಳು ಆಕೆಯೊಂದಿಗೆ ಸಂಬಂಧ ಹೊಂದಿದ್ದ 27 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಮಳೆ ಬಂತೆಂದು ಅಣಬೆ ಸಂಗ್ರಹಿಸಲು ಹೊಲಕ್ಕೆ ಹೋದ ಸ್ಥಳೀಯರು ರಕ್ತಸಿಕ್ತ ಚಾಕು ಮತ್ತು ಮಣ್ಣಿನಲ್ಲಿ ಕೂದಲನ್ನು ಕಂಡು ಬೆಚ್ಚಿಬಿದ್ದಿದ್ದರು. ಗೋಬಿಚೆಟ್ಟಿಪಾಳಯಂ ಪಟ್ಟಣದ ಬಳಿಯ ಕೃಷಿಭೂಮಿಯಲ್ಲಿ ಮೂರು ಅಡಿ ಆಳದ ಗುಂಡಿಯಿಂದ ಪೊಲೀಸರು ಮಹಿಳೆಯ ಶವವನ್ನು ಹೊರತೆಗೆದಿದ್ದಾರೆ.
ಮೃತರನ್ನು ಅಪ್ಪಕುಡಲ್ ಪಟ್ಟಣದ ಬ್ಯೂಟಿಷಿಯನ್ ಸೋನಿಯಾ ಎಂದು ಗುರುತಿಸಲಾಗಿದೆ. ಅವರು ನವೆಂಬರ್ 1 ರಿಂದ ಕಾಣೆಯಾಗಿದ್ದರು. ಅವರು ಕೆಲಸದಿಂದ ಮನೆಗೆ ಬಾರದ ಕಾರಣ ಅವರ ಕುಟುಂಬವು ನಾಪತ್ತೆ ದೂರು ದಾಖಲಿಸಿದೆ. ವಿಧವೆಯಾಗಿರುವ ಸೋನಿಯಾ, ತನ್ನ ಮಗ, ಮಗಳು ಮತ್ತು ತಾಯಿಯೊಂದಿಗೆ ವಾಸಿಸುತ್ತಿದ್ದರು.
ತನಿಖೆಯಲ್ಲಿ ಆಕೆ ಬಿ.ಕಾಂ ಪದವೀಧರ ಮತ್ತು ಶವ ಪತ್ತೆಯಾದ ಬಾಳೆ ತೋಟದ ಮಾಲೀಕ ಮೋಹನ್ ಕುಮಾರ್ ಎಂಬ ಆರೋಪಿಯೊಂದಿಗೆ ಸಂಪರ್ಕ ಹೊಂದಿರುವ ಕರೆ ದಾಖಲೆಗಳು ಬಹಿರಂಗಗೊಂಡಿವೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಇಬ್ಬರೂ ಸಂಬಂಧದಲ್ಲಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಆ ಮಹಿಳೆ ತನ್ನನ್ನು ಮದುವೆಯಾಗುವಂತೆ ಕೇಳುತ್ತಲೇ ಇದ್ದಳು, ಮತ್ತು ಇದು ಕೊಲೆಗೆ ಕಾರಣವಾಯಿತು ಎಂದು ಆತ ಬಾಯ್ಬಿಟ್ಟಿದ್ದಾನೆ. ಸೋನಿಯಾ ಮತ್ತು ಮೋಹನ್ ಕುಮಾರ್ ಎರಡು ವರ್ಷಗಳ ಹಿಂದೆ ಗೋಬಿಚೆಟ್ಟಿಪಾಳ್ಯಂ ಬಳಿಯ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮೊದಲು ಭೇಟಿಯಾದರು. ಕಾಲಾನಂತರದಲ್ಲಿ, ಅವರು ನಡುವೆ ಸಂಬಂಧ ಬೆಳೆದಿತ್ತು.
ಅಪರಾಧ ನಡೆದ ದಿನ ಮೋಹನ್ ಕುಮಾರ್ ತನ್ನ ಜಮೀನಿನಲ್ಲಿ ಗುಂಡಿ ತೋಡಿ ರಾತ್ರಿ 8 ಗಂಟೆ ಸುಮಾರಿಗೆ ಸೋನಿಯಾಳನ್ನು ಅಲ್ಲಿಗೆ ಕರೆಸಿಕೊಂಡಿದ್ದ . ಅವನು ಆಕೆಯ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ, ಸಣ್ಣ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಂದು, ನಂತರ ಆಕೆಯ ಶವವನ್ನು ಹೂತು ಹಾಕಿ, ಆಕೆಯ ಫೋನ್ ಮತ್ತು ಬಟ್ಟೆಗಳನ್ನು ಭವಾನಿ ಕಾಲುವೆಯ ಬಳಿ ವಿಲೇವಾರಿ ಮಾಡಿದ್ದ. ಪೆರುಂಡುರೈ ಸರ್ಕಾರಿ ವೈದ್ಯಕೀಯ ಕಾಲೇಜಿನ ವೈದ್ಯಕೀಯ ತಂಡದೊಂದಿಗೆ ಸ್ಥಳದಲ್ಲೇ ಪರೀಕ್ಷೆ ಮತ್ತು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.