ರೇಣುಕಾಸ್ವಾಮಿ ಕೊಲೆ ಪ್ರಕರಣ: ಇಂದು ಸೆಷನ್ಸ್ ಕೋರ್ಟ್ನಲ್ಲಿ ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳ ವಿರುದ್ಧ ಚಾರ್ಜ್ ಫ್ರೇಮ್

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಆರೋಪಿಗಳ ವಿರುದ್ಧ ಇಂದು ಸೆಷನ್ಸ್ ಕೋರ್ಟ್ನಲ್ಲಿ ಚಾರ್ಜ್ ಫ್ರೇಮ್ ಮಾಡಲಾಗುತ್ತೆ. ಹಾಗಾಗಿ ಇಂದು ಪ್ರಕರಣದಲ್ಲಿ ಭಾಗಿಯಾಗಿರುವ 17 ಆರೋಪಿಗಳ ಖುದ್ದು ಹಾಜರಾತಿಗೆ ಕೋರ್ಟ್ ಸೂಚನೆ ನೀಡಿದೆ.

ಕೋರ್ಟ್ ಸೂಚನೆಯಂತೆ ದರ್ಶನ್, ಪವಿತ್ರಾಗೌಡ (Pavithra Gowda), ನಂದೀಶ್ , ಕೇಶವಮೂರ್ತಿ, ಪವನ್, ರಾಘವೇಂದ್ರ, ಧನುಷ್, ಧನರಾಜು, ವಿನಯ್, ಪ್ರದೂಷ್ ಸೇರಿ ಪ್ರಕರಣದ ಎಲ್ಲಾ 17 ಆರೋಪಿಗಳನ್ನ ಜೈಲು ಅಧಿಕಾರಿಗಳು ಕೋರ್ಟ್ಗೆ ಇಂದು ಹಾಜರುಪಡಿಸಲಿದ್ದಾರೆ.
ಆರೋಪಿಗಳಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಚಾರ್ಜ್ ಪ್ರೇಮ್ ಮಾಡುವ ಬಗ್ಗೆ ನ್ಯಾಯಾಧೀಶರು ಆರೋಪಿಗಳ ಗಮನಕ್ಕೆ ತರುತ್ತಾರೆ. ಪ್ರತಿಯೊಬ್ಬ ಆರೋಪಿಗಳಿಗೂ ಅವರ ಮೇಲೆ ಇರುವ ಆರೋಪದ ಬಗ್ಗೆ ಅದರ ಗಮನಕ್ಕೆ ತರುತ್ತಾರೆ ಅದಕ್ಕೆ ಆರೋಪಿತರು ಒಪ್ಪಿಗೆ ಸೂಚಿಸುತ್ತಾರೋ ಇಲ್ಲ ಅನ್ನುವುದನ್ನ ನೋಡಿ ಮುಂದಿನ ತೀರ್ಮಾನ ನ್ಯಾಯಾದೀಶರು ಕೈಗೊಳ್ತಾರೆ