ನಿವೃತ್ತಿ ವದಂತಿ ನಡುವೆಯೇ ರೋಹಿತ್ ಶರ್ಮಾಗೆ ಐತಿಹಾಸಿಕ ಮೈಲುಗಲ್ಲು; 38ರ ವಯಸ್ಸಿನಲ್ಲಿ ವಿಶ್ವದ ನಂ.1 ಏಕದಿನ ಬ್ಯಾಟರ್!

ಮುಂಬೈ: ನಿವೃತ್ತಿಯ ವದಂತಿ ನಡುವೆ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ರೋಹಿತ್ ಶರ್ಮಾ (Rohit Sharma) ಹೊಸ ಮೈಲುಗಲ್ಲು ಸಾಧಿಸಿದ್ದಾರೆ. ತಮ್ಮ 38ನೇ ವಯಸ್ಸಿನಲ್ಲಿ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂ.1 ಬ್ಯಾಟ್ಸ್ ಮನ್ ಆಗಿ ಹೊರಹೊಮ್ಮಿದ್ದಾರೆ.

ಇಂದು ಬಿಡುಗಡೆಯಾದ ನೂತನ ಏಕದಿನ ರ‍್ಯಾಂಕಿಗ್ ಪಟ್ಟಿಯಲ್ಲಿ (ICC ODI Rankings) ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್‌ರನ್ನ (Shubman Gill) ಹಿಂದಿಕ್ಕಿ ಹಿಂದಿಕ್ಕಿ ವಿಶ್ವದ ನಂ.1 ಬ್ಯಾಟರ್ ಆಗಿ ಮಿಂಚಿದ್ದಾರೆ. ಆದ್ರೆ 5ನೇ ಸ್ಥಾನದಲ್ಲಿದ್ದ ಕೊಹ್ಲಿ 6ನೇ ಸ್ಥಾನಕ್ಕೆ ಕುಸಿದಿರೋದು ಅಭಿಮಾನಿಗಳಿಗೆ ಬೇಸರ ತರಿಸಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ (Australia) ವಿರುದ್ಧದ ಏಕೆದಿನ ಸರಣಿಯಲ್ಲಿ ಹಿಟ್ ಮ್ಯಾನ್ ಗರಿಷ್ಠ ರನ್ ಗಳಿಸಿದ್ದರು. ಮೂರು ಪಂದ್ಯಗಳಲ್ಲಿ 1 ಶತಕ, 1 ಅರ್ಧಶತಕ ಸೇರಿ 202ರ ರನ್‌ಗಳಿಸಿ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ರು.
ಟಾಪ್-5ನಲ್ಲಿ ಇಬ್ಬರು ಇಂಡಿಯನ್ಸ್
ನೂತನವಾಗಿ ಬಿಡುಗಡೆಯಾದ ಏಕದಿನ ರ‍್ಯಾಂಕಿಗ್‌ನಲ್ಲಿ 781 ಅಂಕಗಳೊಂದಿಗೆ ಹಿಟ್‌ಮ್ಯಾನ್ ಅಗ್ರಸ್ಥಾನದಲ್ಲಿದ್ದಾರೆ. ಅಫ್ಘಾನ್‌ನ ಇಬ್ರಾಹಿಂ ಜದ್ರಾನ್ 764, ಶುಭಮನ್ ಗಿಲ್ 745 ಅಂಕ, ಪಾಕ್‌ನ ಬಾಬರ್ ಆಜಂ 739 ಅಂಕ, ಕಿವೀಸ್‌ನ ಡೇರಿಲ್ ಮಿಚೆಲ್ 734 ಅಂಕಗಳೊಂದಿಗೆ ಕ್ರಮವಾಗಿ 2,3,4,5ನೇ ಸ್ಥಾನಗಳಲ್ಲಿದ್ದಾರೆ.
6ಕ್ಕೆ ಕುಸಿದ ಕೊಹ್ಲಿ
ಆಸ್ಟ್ರೇಲಿಯಾ ವಿರುದ್ಧದ 3ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳಿದ್ದರು. ಆಸಿಸ್‌ವಿರುದ್ಧ 237 ಚೇಸಿಂಗ್‌ನಲ್ಲಿ ಅಜೇಯ 74 ರನ್ ಗಳಿಸಿದರು. ಆದ್ರೆ ಮೊದಲ 2 ಪಂದ್ಯಗಳಲ್ಲಿ ಶೂನ್ಯ ಸುತ್ತಿದರು. ಇದರಿಂದ 725 ಅಂಕಗಳಷ್ಟೇ ಪಡೆದುಕೊಂಡು 5 ರಿಂದ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.
ನಿವೃತ್ತಿ ವದಂತಿ ನಡುವೆಯೇ ರೋಹಿತ್ ಶರ್ಮಾಗೆ ಐತಿಹಾಸಿಕ ಮೈಲುಗಲ್ಲು; 38ರ ವಯಸ್ಸಿನಲ್ಲಿ ವಿಶ್ವದ ನಂ.1 ಏಕದಿನ ಬ್ಯಾಟರ್!