ಮದುವೆ ದಿನವಾದರೂ ಬ್ಲೌಸ್ ನೀಡದ ಟೈಲರ್‌ಗೆ ಕೋರ್ಟ್ ಶಾಕ್!

ಅಹಮದಾಬಾದ್: ಸಾಮಾನ್ಯವಾಗಿ ಮದುವೆ, ಹಬ್ಬಗಳು ಏನೇ ಇರಲಿ ವರ್ಷದಲ್ಲಿ ಹತ್ತಾರು ಬಾರಿ ಟೈಲರ್ಗಳ ಬಳಿ ಹೋಗಲೇಬೇಕು. ಅವರು ಹೇಳಿರುವ ಸಮಯದಲ್ಲಿ ಬಟ್ಟೆ(Cloth) ಕೊಡದಿದ್ದಾಗ ಕೋಪ ಮಾಡಿಕೊಂಡು ನಮ್ಮನ್ನು ನಾವು ಸುಧಾರಿಸಿಕೊಂಡು ಮತ್ತೆ ಅವರ ಬಳಿಯೇ ಕೊಡುತ್ತೇವೆ. ಆದರೆ ಇಲ್ಲೊಬ್ಬ ಮಹಿಳೆ ಮದುವೆಗೆ ಸಕಾಲದಲ್ಲಿ ಬ್ಲೌಸ್ ಹೊಲಿದುಕೊಟ್ಟಿಲ್ಲ ಎಂದು ಟೈಲರ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಳು.

ಕುಟುಂಬದಲ್ಲಿ ಸಂತೋಷದ ಸಂದರ್ಭವಾಗಬೇಕಿದ್ದ ಈ ಸಂದರ್ಭ ಗ್ರಾಹಕ ನ್ಯಾಯಾಲಯದ ವಿವಾದವಾಗಿ ಪರಿವರ್ತನೆಗೊಂಡಿತ್ತು. ಗ್ರಾಹಕರ ನ್ಯಾಯಾಲಯವು ಟೈಲರ್‌ಗೆ 7 ಸಾವಿರ ರೂ. ದಂಡ ವಿಧಿಸಿದೆ.
ಡಿಸೆಂಬರ್ 24ರಂದು ಅಹಮದಾಬಾದ್‌ನ ಮಹಿಳೆಯೊಬ್ಬರು ಸಂಬಂಧಿಕರ ಮದುವೆಗೆಂದು ಬ್ಲೌಸ್ ಹೊಲಿಯಲು ಕೊಟ್ಟಿದ್ದರು. ಹಿಂದಿನ ತಿಂಗಳೇ 4,395ರೂ. ಮುಂಗಡವಾಗಿ ಪಾವತಿಸಿದ್ದರು. ಡಿಸೆಂಬರ್ 14ರಂದು ಬ್ಲೌಸ್ ಪಡೆಯಲು ಹೋದಾಗ ಅವರು ಹೇಳಿದಂತೆ ಟೈಲರ್ ಬ್ಲೌಸ್ ಹೊಲಿದಿರಲಿಲ್ಲ. ತಪ್ಪನ್ನು ಸರಿಪಡಿಸುವುದಾಗಿ ಅವರಿಗೆ ಭರವಸೆ ನೀಡಿದ್ದರು. ಮದುವೆ ಮುಗಿದು ಹೋದರೂ ಬ್ಲೌಸ್ ಸಿಕ್ಕಿರಲಿಲ್ಲ.
ನಂತರ ಮಹಿಳೆ ಟೈಲರ್‌ಗೆ ನೋಟಿಸ್ ಕಳುಹಿಸಿದ್ದಾರೆ, ಟೈಲರ್ ಆಯೋಗದ ಮುಂದೆ ಹಾಜರಾಗಲಿಲ್ಲ. ಬ್ಲೌಸ್ ತಲುಪಿಸಲು ಟೈಲರ್ ವಿಫಲವಾದ ಕಾರಣ ಆತನನ್ನು ತಪ್ಪಿತಸ್ಥನೆಂದು ನ್ಯಾಯಾಲಯ ಘೋಷಿಸಿತು. ದೂರದಾರ ಮಾನಸಿಕ ಕಿರುಕುಳ ಅನುಭವಿಸಿದ್ದಾರೆಂದು ನ್ಯಾಯಾಲಯ ತೀರ್ಪು ನೀಡಿತು. ನ್ಯಾಯಾಲಯವು ಟೈಲರ್‌ಗೆ ವಾರ್ಷಿಕ ಶೇ.7ರಷ್ಟು ಬಡ್ಡಿಯೊಂದಿಗೆ ಹೆಚ್ಚುವರಿ ಪರಿಹಾರವನ್ನು ಪಾವತಿಸುವಂತೆ ನಿರ್ದೇಶಿಸಿತು, ಇದು ಸುಮಾರು ರೂ. 7,000 ರಷ್ಟಾಗಿದೆ.
ಕೇರಳದಲ್ಲೂ ಇಂಥದ್ದೇ ಪ್ರಕರಣ ನಡೆದಿತ್ತು ಈ ವರ್ಷದ ಏಪ್ರಿಲ್‌ನಲ್ಲಿ ಕೇರಳದ ಕೊಚ್ಚಿಯಲ್ಲಿ ಇದೇ ರೀತಿಯ ಪ್ರಕರಣ ವರದಿಯಾಗಿತ್ತು.ಎರ್ನಾಕುಲಂ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು, ನೀಡಿದ ಅಳತೆಗಳ ಪ್ರಕಾರ ಶರ್ಟ್ ಹೊಲಿಯಲು ವಿಫಲವಾದ ಕಾರಣ, ಗ್ರಾಹಕನಿಗೆ 15,000 ರೂ. ಪರಿಹಾರವನ್ನು ನೀಡುವಂತೆ ನ್ಯಾಯಾಲಯ ಆದೇಶಿಸಿತ್ತು.