Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

FATF ಹೊಸ ವರದಿ: ಉತ್ತರ ಕೊರಿಯಾ, ಇರಾನ್, ಮ್ಯಾನ್ಮಾರ್ ಮತ್ತೆ ʻಕಪ್ಪು ಪಟ್ಟಿʼಗೆ; ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದರಲ್ಲಿ ಗಂಭೀರ ನ್ಯೂನತೆಗಳು

Spread the love

ನವದೆಹಲಿ: ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಹಣ ವರ್ಗಾವಣೆಯನ್ನು ವಿಶ್ವಾದ್ಯಂತ ಮೇಲ್ವಿಚಾರಣೆ ಮಾಡುವ ಜಾಗತಿಕ ಸಂಸ್ಥೆ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ತನ್ನ ಇತ್ತೀಚಿನ ಪರಿಶೀಲನಾ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಉತ್ತರ ಕೊರಿಯಾ (North Korea), ಇರಾನ್ (Iran) ಮತ್ತು ಮ್ಯಾನ್ಮಾರ್‌ನ್ನು (Myanmar) ಮತ್ತೆ ʻಕಪ್ಪು ಪಟ್ಟಿಗೆʼ (Blacklist) ಸೇರಿಸಲಾಗಿದೆ. ನೇಪಾಳ (Nepal) ಸೇರಿದಂತೆ 18 ದೇಶಗಳನ್ನು ʻಬೂದು ಪಟ್ಟಿʼಯಲ್ಲಿಯೇ ಉಳಿಸಿಕೊಳ್ಳಲಾಗಿದೆ.

ಕಪ್ಪು ಪಟ್ಟಿಯಲ್ಲಿರುವ ಮೂರು ದೇಶಗಳು ತಮ್ಮ ಹಣ ವರ್ಗಾವಣೆ ವಿರೋಧಿ ಮತ್ತು ಭಯೋತ್ಪಾದನಾ ನಿಗ್ರಹ ಹಣಕಾಸು ವ್ಯವಸ್ಥೆಗಳಲ್ಲಿ ಗಂಭೀರ ನ್ಯೂನತೆಗಳನ್ನು ಹೊಂದಿವೆ ಎಂದು FATF ಹೇಳಿದೆ. ಈ ದೇಶಗಳು ತಮ್ಮ ಬದ್ಧತೆಗಳನ್ನು ಪೂರೈಸುವಲ್ಲಿ ನಿರಂತರವಾಗಿ ವಿಫಲವಾಗಿವೆ. ಇದು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಸಿದೆ.

ಅಕ್ಟೋಬರ್ 2022 ರಲ್ಲಿ ಮ್ಯಾನ್ಮಾರ್‌ನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಇನ್ನೂ ಕ್ರಿಯಾ ಯೋಜನೆಯ ಅಂಶಗಳಲ್ಲಿ ಪ್ರಗತಿ ಸಾಧಿಸಿಲ್ಲ. ಅಕ್ಟೋಬರ್ 2025 ರೊಳಗೆ ಸುಧಾರಣೆಗಳನ್ನು ಮಾಡದಿದ್ದರೆ, ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ FATF ಎಚ್ಚರಿಸಿದೆ.

2018 ರಲ್ಲಿ ಕೊನೆಗೊಂಡ ತನ್ನ ಕ್ರಿಯಾ ಯೋಜನೆಯನ್ನು ಇರಾನ್ ಇನ್ನೂ ಪೂರ್ಣಗೊಳಿಸಿಲ್ಲ. ಅಕ್ಟೋಬರ್ 2025 ರಲ್ಲಿ ಭಯೋತ್ಪಾದನೆಗೆ ಹಣಕಾಸು ಒದಗಿಸುವ ಬಗ್ಗೆ ವಿಶ್ವಸಂಸ್ಥೆಯ ಕಾನೂನನ್ನು ಅದು ಅನುಮೋದಿಸಿದೆ. ಆದರೂ ಹಲವಾರು ಪ್ರಮುಖ ನ್ಯೂನತೆಗಳು ಇನ್ನೂ ಉಳಿದಿವೆ ಎಂದು FATF ಹೇಳಿದೆ.

ಉತ್ತರ ಕೊರಿಯಾದ ಅಕ್ರಮ ಶಸ್ತ್ರಾಸ್ತ್ರ ಯೋಜನೆ ಮತ್ತು ಹಣ ವರ್ಗಾವಣೆ ಅಂತರರಾಷ್ಟ್ರೀಯ ಭದ್ರತೆಗೆ ದೊಡ್ಡ ಬೆದರಿಕೆಯಾಗಿದೆ. ಡಿಪಿಆರ್‌ಕೆ ಜೊತೆಗಿನ ಹಣಕಾಸಿನ ವಹಿವಾಟುಗಳನ್ನು ಮಿತಿಗೊಳಿಸಲು, ಅದರ ಬ್ಯಾಂಕ್ ಶಾಖೆಗಳನ್ನು ಮುಚ್ಚಲು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಲು FATF ಎಲ್ಲಾ ದೇಶಗಳನ್ನು ಒತ್ತಾಯಿಸಿದೆ.

ನೇಪಾಳ, ಅಲ್ಜೀರಿಯಾ, ಅಂಗೋಲಾ, ಬಲ್ಗೇರಿಯಾ, ಕ್ಯಾಮರೂನ್, ಕೋಟ್ ಡಿ’ಐವೊಯಿರ್, ಕಾಂಗೋ, ಕೀನ್ಯಾ, ಲಾವೋಸ್, ಮೊನಾಕೊ, ನಮೀಬಿಯಾ, ದಕ್ಷಿಣ ಸುಡಾನ್, ಸಿರಿಯಾ, ವೆನೆಜುವೆಲಾ ಮತ್ತು ವಿಯೆಟ್ನಾಂ ಸೇರಿದಂತೆ 18 ದೇಶಗಳ ಪ್ರಗತಿಯನ್ನು FATF ಪರಿಶೀಲಿಸಿದ್ದು, ಅವುಗಳನ್ನು ಬೂದು ಪಟ್ಟಿಯಲ್ಲಿಯೇ ಉಳಿಸಿದೆ


Spread the love
Share:

administrator

Leave a Reply

Your email address will not be published. Required fields are marked *