ಶಿವಗಂಗೆ ಶೃಂಗೇರಿ ಮಠದ ಶ್ರೀ ಪುರುಷೋತ್ತಮ ಭಾರತಿ ಮಹಾಸ್ವಾಮೀಜಿ ಲಿಂಗೈಕ್ಯ: ಭಕ್ತ ಸಮೂಹಕ್ಕೆ ಆಘಾತ

ನೆಲಮಂಗಲ : ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿರುವ ಶೃಂಗೇರಿ ಶಾಖಾ ಮಠದ ಮಠಾಧಿಪತಿ ಶ್ರೀ ಶ್ರೀ ಪುರುಷೋತ್ತಮ ಭಾರತೀ ಮಹಾಸ್ವಾಮಿಗಳು ಇಂದು ಮುಂಜಾನೆ 4.25 ಕ್ಕೆ ಬ್ರಹ್ಮೀಭೂತರಾಗಿದ್ದಾರೆ.

ಶ್ರೀಗಳಿಗೆ 75 ವರ್ಷ ವಯಸ್ಸಾಗಿತ್ತು. ಬಹು ಅಂಗಾಂಗ ವೈಪಲ್ಯದಿಂದ ಇಂದು ದೈವಾದೀನರಾಗಿದ್ದಾರೆ. ಕಳೆದೆರಡು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಶ್ರೀಗಳು ಬೆಂಗಳೂರಿನ ರಂಗದೊರೈ ಸ್ಮಾರಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು ಶ್ರೀಗಳ ಅಂತ್ಯ ಸಂಸ್ಕಾರ:
ಶ್ರೀಗಳ ಅಂತ್ಯ ಸಂಸ್ಕಾರ ಮಠದ ಆವರಣದಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಶೃಂಗೇರಿ ಜಗದ್ಗುರುಗಳ ಆಶೀರ್ವಾದದಂತೆ ಸಂಪ್ರದಾಯ ಬದ್ಧವಾಗಿ ಅಂತಿಮ ಕ್ರಿಯೆಗಳು ನೆರವೇರಲಿವೆ ಎಂದು ಮೂಲಗಳು ತಿಳಿಸಿವೆ.
ಶ್ರೀಗಳು ಶೃಂಗೇರಿ ಶಾರದಾ ಪೀಠದ ಶಾಖಾ ಮಠದ ಮೂಲಕ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು. ಭಕ್ತರು, ಶಿಷ್ಯವರ್ಗ ಮತ್ತು ಸ್ಥಳೀಯರು ಶ್ರೀಗಳ ನಿಧನದಿಂದ ಆಘಾತಕ್ಕೊಳಗಾಗಿದ್ದಾರೆ. ಶ್ರೀಗಳ ಆತ್ಮಕ್ಕೆ ಸದ್ಗತಿ ದೊರೆಯಲಿ ಎಂದು ಭಕ್ತರು ಪ್ರಾರ್ಥಿಸುತ್ತಿದ್ದಾರೆ.