Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರಿಗೆ ರಾಷ್ಟ್ರೀಯ ಗೌರವ: ಸಂಸತ್ ಆವರಣದಲ್ಲಿ ವಿಜೃಂಭಣೆಯ 201ನೇ ವಿಜಯೋತ್ಸವ ಮತ್ತು ಜನ್ಮದಿನೋತ್ಸವ ಆಚರಣೆ

Spread the love

ನವದೆಹಲಿ: ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮನವರ (Kittur Rani Chennamma) 201ನೇ ವಿಜಯೋತ್ಸವ ಹಾಗೂ ಜನ್ಮದಿನೋತ್ಸವವನ್ನು ಸಂಸತ್ ಆವರಣದಲ್ಲಿ ಆಚರಿಸಲಾಯಿತು. ಸಂಸತ್ (Parliament) ಆವರಣದ ಪ್ರೇರಣಾ ಸ್ಥಳದಲ್ಲಿರುವ ಚೆನ್ನಮ್ಮ ಪ್ರತಿಮೆಗೆ ತುಮಕೂರು ಲೋಕಸಭಾ ಸದಸ್ಯ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸೋಮಣ್ಣ, ರಾಣಿ ಚೆನ್ನಮ್ಮನವರ ಪುತ್ಥಳಿಯನ್ನು ಸಂಸತ್ತಿನ ಆವರಣದಲ್ಲಿ 2007ರಲ್ಲಿ ಸ್ಥಾಪಿಸಲಾಗಿದೆ. ಕಳೆದ ವರ್ಷ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬೆಂಬಲ ಮತ್ತು ಲೋಕಸಭಾ ಅಧ್ಯಕ್ಷ ಓಂ ಬಿರ್ಲಾ ಅವರ ಸಹಕಾರದಿಂದ 200ನೇ ರಾಣಿ ಚೆನ್ನಮ್ಮನವರ ವಿಜಯೋತ್ಸವ ಮತ್ತು ಜನ್ಮದಿನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗಿತ್ತು. ಅದೇ ರೀತಿ ಈ ವರ್ಷವೂ ಸಹ ರಾಣಿ ಚೆನ್ಮಮ್ಮನವರ 201ನೇ ವಿಜಯೋತ್ಸವ ಮತ್ತು ಜನ್ಮದಿನೋತ್ಸವ ಆಚರಣೆಯನ್ನು ಸಂಸತ್ತಿನ ಅವರಣದ ಪ್ರೇರಣಾ ಸ್ಥಳದಲ್ಲಿ ಮಾಡಲಾಗಿದೆ ಎಂದು ತಿಳಿಸಿದರು. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಕರ್ನಾಟಕದ ಸಂಸ್ಕೃತಿ, ಈ ದೇಶಕ್ಕೆ ಕೊಡುಗೆ ನೀಡಿದ ಕನ್ನಡದ ಮಹನೀಯರನ್ನು, ಸ್ವಾತಂತ್ರ‍್ಯ ಹೋರಾಟಗಾರರನ್ನು, ವೀರವನಿತೆಯರನ್ನು ನೆನಪಿಸುವ ಮತ್ತು ಅವರನ್ನು ಗೌರವಿಸುವ ಕೆಲಸ ಮಾಡುವಲ್ಲಿ ಸದಾ ಸನ್ನದ್ಧವಾಗಿದೆ. ಇದಕ್ಕೆ ಪೂರಕವಾಗಿಯೇ ನಾಳೆ ಸಿರಿಪೋರ್ಟ ಆಡಿಟೋರಿಯಂನಲ್ಲಿ ನಡೆಯಲಿರುವ ಕಿತ್ತೂರು ರಾಣಿ ಚೆನ್ನಮ್ಮನವರ 201ನೇ ವಿಜಯೋತ್ಸವ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವೀರರಾಣಿ ಚೆನ್ಮಮ್ಮನವರ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಲಿದ್ದಾರೆ ಎಂದರು

ಸ್ವಾತಂತ್ರ‍್ಯ ಹೋರಾಟಗಾರ್ತಿ ರಾಣಿ ಚೆನ್ನಮ್ಮನವರ ಸಾಧನೆ ಮತ್ತು ಕಿತ್ತೂರಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಕರ್ನಾಟಕ ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿಯಿಂದ ನಿರ್ವಹಿಸಬೇಕಾದ ಅವಶ್ಯಕತೆ ಇದೆ. ಇದಕ್ಕೆ ಪೂರಕವಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಕಿತ್ತೂರು ಸಂಸ್ಥಾನದ ಕೋಟೆ ಕೊತ್ತಲೆಗಳಲ್ಲಿ ಸಮರ್ಪಕ ನಿರ್ವಹಣೆ ಇಲ್ಲದಿರುವುದನ್ನು ಸಾರ್ವಜನಿಕರು ಮನಗಂಡಿದ್ದು, ಈ ಬಗ್ಗೆ ಕಿತ್ತೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕಾಗಿದೆ. ಬೈಲಹೊಂಗಲದಲ್ಲಿರುವ ರಾಣಿ ಚೆನ್ಮಮ್ಮನವರ ಸಮಾಧಿಯನ್ನು ಅಭಿವೃದ್ಧಿಗೊಳಿಸಿ, ಅದನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಬೇಕು. ವೀರ ರಾಣಿ ಚೆನ್ಮಮ್ಮನವರ ಜೀವನ ಮತ್ತು ಸಾಧನೆ ಕುರಿತು ಭಾರತೀಯ ಎಲ್ಲಾ ಭಾಷೆಗಳಲ್ಲೂ ಪುಸ್ತಕವನ್ನು ಹೊರತರಬೇಕೆಂದು ಮನವಿ ಮಾಡಿದೆ ಎಂದು ನುಡಿದರು


Spread the love
Share:

administrator

Leave a Reply

Your email address will not be published. Required fields are marked *