ಸಿಎಂ ಸ್ಥಾನದ ಕ್ಲೈಮ್ 2028ಕ್ಕೆ: ಯತೀಂದ್ರ ಹೇಳಿಕೆ ವೈಯಕ್ತಿಕ ಅಭಿಪ್ರಾಯ ಎಂದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ: ನಮ್ಮದು ಏನೇ ಇದ್ದರೂ 2028ಕ್ಕೆ ಸಿಎಂ ಸ್ಥಾನದ ಕ್ಲೈಮ್ ಮಾಡುತ್ತೇವೆ. ಯತೀಂದ್ರ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಲೋಕೋಪಯೋಗಿ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಎಲ್ಲರನ್ನು ಜೊತೆಗೆ ಕರೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಏನೇ ಆಗಲಿ ಅದನ್ನು ಪಕ್ಷ ನಿರ್ಧಾರ ಮಾಡಲಿದೆ ಎಂದು ತಿಳಿಸಿದರು.
ಯತಿಂದ್ರ (Yathindra Siddaramaiah) ಅವರು ಅವರ ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ಅಂತಿಮವಾಗಿ ಯಾರು ನಾಯಕ ಎನ್ನುವುದನ್ನು ಪಕ್ಷದ ಶಾಸಕರು ನಿರ್ಧಾರ ಮಾಡುತ್ತಾರೆ. ಅಹಿಂದ ನಾಯಕತ್ವ ಇಲ್ಲದೇ ಪಕ್ಷ ಸಂಘಟನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಎಲ್ಲವನ್ನೂ ಕಾಕತಿಯಲ್ಲಿ ನಿಂತು ನಿರ್ಧಾರ ಮಾಡಲು ಸಾಧ್ಯವಿಲ್ಲ. ಡಿಸೆಂಬರ್ ಕ್ರಾಂತಿಯ ಬಗ್ಗೆ ನಮಗೆ ಗೊತ್ತೇ ಇಲ್ಲ ಎಂದು ತಿಳಿಸಿದರು
ಸಿದ್ದರಾಮಯ್ಯನವರ ನಂತರ ಪಕ್ಷವನ್ನು ಮುನ್ನಡೆಸುವ ವಿಚಾರಕ್ಕೆ, ಎಲ್ಲವನ್ನೂ ಕಾದು ನೋಡೋಣ ಎಂದು ಜಾರಕಿಹೊಳಿ ಉತ್ತರಿಸಿದರು.