ಪತಿ ಕಿರುಕುಳದಿಂದ ಬೇಸತ್ತು ದುರಂತ: 3 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ; ಬಾಗಲಕೋಟೆಯಲ್ಲಿ ಭೀಕರ ಘಟನೆ

ಬಾಗಲಕೋಟೆ: ಪತಿ ಕಿರುಕುಳದಿಂದ ಬೇಸತ್ತು 3 ವರ್ಷದ ಮಗನ ಜೊತೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಚೆನ್ನಮ್ಮ ದೇವಿ ದೇವಸ್ಥಾನದ ಬಳಿ ನಡೆದಿದೆ. ತಾಯಿ ಫಾತಿಮಾ(21) ಮತ್ತು ಪುತ್ರ ಅಬ್ದುಲ್ (3) ಮೃತರು. ಮಗಳ ಸಾವಿಗೆ ಪತಿ (husband) ಮಸ್ತಾನ್ ಸಾಬ್ ಕಿರುಕುಳವೇ ಕಾರಣ ಎಂದು ಫಾತಿಮಾ ಪೋಷಕರು ಆರೋಪಿಸಿದ್ದಾರೆ. ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದದ್ದೇನು?
8 ವರ್ಷದ ಹಿಂದೆ ಜಮೇಲಾ ಎಂಬ ಯುವತಿಯೊಂದಿಗೆ ಮಸ್ತಾನ್ ಸಾಬ್ ಮದುವೆ ಆಗಿದ್ದ. 5 ತಿಂಗಳ ಗರ್ಭಿಣಿಯಾಗಿದ್ದ ಫಾತಿಮಾಳನ್ನು ಪ್ರೀತಿಸಿ ವಿವಾಹವಾಗಿದ್ದ. ಗ್ರಾಮಸ್ಥರ ಸಮ್ಮುಖದಲ್ಲೇ ಮದುವೆ ಆಗಿದ್ದ. ಇತ್ತೀಚೆಗೆ ಫಾತಿಮಾಳಿಗೆ ಪತಿ ಮಸ್ತಾನ್ ಸಾಬ್ ಹೆಚ್ಚು ಕಿರುಕುಳ ನೀಡುತ್ತಿದ್ದ ಆರೋಪ ಕೂಡ ಕೇಳಿಬಂದಿದೆ. ಪತಿ ಕಿರುಕುಳದಿಂದ ಬೇಸತ್ತು ಮೂರು ದಿನ ಹಿಂದೆ ಫಾತಿಮಾ ತವರಿಗೆ ಬಂದಿದ್ದಳು. ಮಗಳು ಫಾತಿಮಾ ಸಾವಿಗೆ ಪತಿ ಕಿರುಕುಳವೇ ಕಾರಣ ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮದುವೆಯಾದ 11 ತಿಂಗಳಿಗೆ ಸಾವಿನ ಮನೆ ಸೇರಿದ ಗೃಹಿಣಿ
11 ತಿಂಗಳಿಂದಷ್ಟೆ ನೂರಾರು ಕನಸುಗಳನ್ನ ಕಟ್ಟಿಕೊಂಡು ಮನೆಯವರು ನೋಡಿದ ಯುವಕನ ಜೊತೆ ದಾಂಪತ್ಯ ಜೀವನಕ್ಕೆ ಯುವತಿ ಕಾಲಿಟ್ಟಿದ್ದಳು. ಇನ್ನೊಂದು ತಿಂಗಳು ಕಳೆದಿದ್ದರೆ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಸಹ ಆಚರಿಸಿಕೊಳ್ಳಬೇಕಿತ್ತು. ಆದರೆ ಅಷ್ಟರಲ್ಲಿ ಅತ್ತೆ ಮತ್ತು ಗಂಡನ ಕಿರುಕುಳು ಗೃಹಿಣಿ ವಿಡಿಯೋ ಮಾಡಿಟ್ಟು ಆಹಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿತ್ತು.
ವೇಣು ಎಂಬುವವರ ಜೊತೆಗೆ ನವಂಬರ್ 2024 ರಲ್ಲಿ ಪುಷ್ಪಾಂಜಲಿ ಹಸೆಮಣೆ ಏರಿದ್ದಳು. ಆರಂಭದಲ್ಲಿ ಚೆನ್ನಾಗೆ ಇದ್ದ ಗಂಡ ನಂತರ ತನ್ನ ಮನೆಯವರ ಜೊತೆ ಸೇರಿಕೊಂಡು ಅಸಲಿ ಆಟ ಶುರುಮಾಡಿಕೊಂಡಿದ್ದು ನಿತ್ಯ ಹಣ ಬೇಕು, ಸೈಟ್ ಬೇಕು ಅಂತ ಪುಷ್ಪಾಂಜಲಿಗೆ ಕಿರುಕುಳ ನೀಡಲು ಆರಂಭಿಸಿದನಂತೆ. ಅಲ್ಲದೆ ಎಷ್ಟೇ ಹೇಳಿದರೂ ತವರು ಮನೆಯಿಂದ ಸೈಟ್ ತೆಗೆಸಿಕೊಡುತ್ತಿಲ್ಲ ಅಂತ ಕಳೆದ 9 ತಿಂಗಳಿನಿಂದ ಗೃಹಿಣಿಯ ಜೊತೆ ಸಂಸಾರ ಮಾಡುವುದನೇ ಬಿಟ್ಟಿದ್ನಂತೆ.
ತಾಳಿ ಕಟ್ಟಿದ ಪತ್ನಿ ಅನ್ನೋದನ್ನು ನೋಡದೆ ಹೀನಾಯಮಾನವಾಗಿ ಪತ್ನಿ ಜೊತೆ ನಡೆದುಕೊಂಡ ಗಂಡನಿಂದ ಪತ್ನಿ ಸಾಕಷ್ಟು ಮನನೊಂದಿದ್ದು ಎರಡು ಮೂರು ಭಾರಿ ಮನೆಯವರಿಗೂ ಹೇಳಿದ್ದಳಂತೆ. ಆದರೆ ಸಂಸಾರ ಅಂದ ಮೇಲೆ ಇದೆಲ್ಲ ಇರೋದೆ ಅಂತ ಮನೆಯವರೇ ಮಗಳಿಗೆ ಬುದ್ಧಿವಾದ ಹೇಳಿ ಕಳೆದ ತಿಂಗಳು ಗಂಡನ ಮನೆಗೆ ಕಳಿಸಿದ್ದರು. ಆದರೆ ಗಂಡನ ಮನೆಗೆ ಬಂದ ನಂತರವೂ ತಮ್ಮ ಹಳೆ ಚಾಳಿಯನ್ನ ಕುಟುಂಬಸ್ಥರು ಮುಂದುವರೆಸಿದ್ದು, ಮನೆಯವರು ಕಿರುಕುಳ ತಾಳಲಾರದ ಪುಷ್ಪಾ ಕಾಲೇಜಿಗೆ ಕೆಲಸಕ್ಕೆ ಅಂತ ಹೋದವಳು ವಾಪಸ್ ಬಂದಿರಲಿಲ್ಲ. ಎಲ್ಲೆಡೆ ಹುಡುಕಾಡಿದ ಪೋಷಕರಿಗೆ ಘಾಟಿ ಸುಬ್ರಮಣ್ಯದ ವಿಶ್ವೇಶ್ವರಯ್ಯ ಪಿಕಪ್ ಡ್ಯಾಂ ನಲ್ಲಿ ಮೃತದೇಹ ಪತ್ತೆ ಆಗಿತ್ತು.
ಸದ್ಯ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಮೃತಳ ಪೋಷಕರು ವರದಕ್ಷಿಣೆ ಕಿರುಕುಳ ಮತ್ತು ಸಾವಿಗೆ ಪ್ರಚೋದನೆ ಸಂಬಂಧ ಗಂಡ ಮತ್ತು ಆತನ ಕುಟುಂಬಸ್ಥರ ವಿರುದ್ದ ಪ್ರಕರಣ ದಾಖಲಿಸಿದ್ದು, ಗಂಡ ವೇಣು ಮತ್ತು ಮಾವ ಗೋವಿಂದಪ್ಪನನ್ನ ವಶಕ್ಕೆ ಪಡೆದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.