ಆರ್ಥಿಕ ಸಂಕಷ್ಟದಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ: ಮಸೂದ್ ಅಜರ್ ಸಹೋದರಿ ನೇತೃತ್ವದಲ್ಲಿ ‘ಆನ್‌ಲೈನ್ ಜಿಹಾದಿ ಕೋರ್ಸ್’ ಆರಂಭ!

ಇಸ್ಲಾಮಾಬಾದ್: ಪೆಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಮೂಲಕ ತಿರುಗೇಟು ನೀಡಿತ್ತು. ಉಗ್ರರ 9 ನೆಲೆಗಳನ್ನು ಭಾರತ ಧ್ವಂಸ ಮಾಡಿತ್ತು. ಈ ಪೈಕಿ ಉಗ್ರ ಮಸೂದ್ ಅಜರ್ ಅವರ ಜೈಶ್ ಇ ಮೊಹಮ್ಮದ್ ನೆಲೆ ಕೂಡ ಧ್ವಂಸಗೊಂಡಿತ್ತು. ಈ ದಾಳಿಯಲ್ಲಿ ಮಸೂದ್ ಅಜರ್ ಅವರ ಕುಟುಂಬದ ಹಲವರು ಹತ್ಯೆಯಾಗಿದ್ದರು. ಬಳಿಕ ಜೈಶ್ ಇ ಮೊಹಮ್ಮದ್ ಮಹತ್ವದ ಸಂದೇಶ ಸಾರಲು, ಮಹಿಳಾ ಘಟಕ ಘೋಷಿಸಿತ್ತು. ಮಸೂದ್ ಅಜರ್ ಸಹೋದರಿ ನೇತೃತ್ವದ ಜಮಾತ್ ಉಲ್ ಮುಮಿನಾತ್ ಈ ಘಟಕ ಮುನ್ನಡೆಸುತ್ತಿದ್ದಾರೆ. ಇದೀಗ ಈ ಮಹಿಳಾ ಉಗ್ರ ಘಟಕ ಮಹಿಳೆಯರಿಗೆ ಆನ್‌ಲೈನ್ ಜಿಹಾದಿ ಕೋರ್ಸ್ ಆರಂಭಿಸಿದೆ. ಪಾಕಿಸ್ತಾನದ 500 ರೂಪಾಯಿ ಶುಲ್ಕ ಇಡಲಾಗಿದ್ದು, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಹಲವು ಮಹಿಳೆಯರು ಈ ಕೋರ್ಸ್‌ಗೆ ಸೇರಿಕೊಂಡಿದ್ದಾರೆ.

ತುಫತ್ ಅಲ್ ಮೊಮಿನತ್
ಮಹಿಳಾ ಉಗ್ರ ಘಟಕ ಆರಂಭಿಸಿರುವ ಆನ್‌ಲೈನ್ ಜಿಹಾದಿ ಕೋರ್ಸ್‌ಗೆ ತುಫತ್ ಅಲ್ ಮೊಮಿನತ್ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಪಾಕಿಸ್ತಾನ ರೂಪಾಯಿ 500 ರೂಪಾಯಿ ನೀಡಿ ಹಲವರು ಸೇರಿಕೊಂಡಿದ್ದಾರೆ. ಇದೀಗ ಮಹಿಳಾ ಘಟಕ ಈ ಕೋರ್ಸ್ ಮೂಲಕ ಹಣದ ಜೊತೆ ಕಾರ್ಯಾವ್ಯಾಪ್ತಿ ಹೆಚ್ಚಿಸಿಕೊಳ್ಳಲ ಮುಂದಾಗಿದೆ. ಉಗ್ರ ವಲಯದಲ್ಲಿ ಈ ಆನ್‌ಲೈನ್ ಕೋರ್ಸ್‌ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ನವೆಂಬರ್ 8 ರಿಂದ ಕೋರ್ಸ್ ಆರಂಭ
ಮಹಿಳಾ ಉಗ್ರ ಘಟಕ ಆರಂಭಿಸಿರುವ ಜಿಹಾದಿ ಆನ್‌ಲೈನ್ ಕೋರ್ಸ್ ನವೆಂಬರ್ 8 ರಿಂದ ಆರಂಭಗೊಳ್ಳುತ್ತಿದೆ. ಪ್ರತಿ ದಿನ 40 ನಿಮಿಷ ಕೋರ್ಸ್ ಇರಲಿದೆ. ಮಸೂದ್ ಅಜರ್ ಸಹೋದರಿಯಾರದ ಸದಿಯಾ ಅಜರ್ ಹಾಗೂ ಸಮೈರಾ ಅಜರ್ ತರಬೇತಿ ನೀಡಲಿದ್ದಾರೆ. ಸದಿಯ ಅಜರ್ ಪತಿ ಯೂಸುಫ್ ಅಜರ್, ಭಾರತದ ಆಪರೇಶನ್ ಸಿಂದೂರ್ ಏರ್‌ಸ್ಟ್ರೈಕ್ ವೇಳೆ ಹತನಾಗಿದ್ದ.
ಜೈಶ್ ಇ ಮೊಹಮ್ಮದ್‌ಗೆ ಆರ್ಥಿಕ ಸಂಕಷ್ಟ
ಜೈಶ್ ಇ ಮೊಹಮ್ಮದ್ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡಿರುವ ಹಿನ್ನಲೆಯಲ್ಲಿ ಇದೀಗ ಜೈಶ್ ಇ ಮೊಹಮ್ಮದ್ ಭಾರಿ ಆರ್ಥಿಕ ಸಂಕಷ್ಟ ಅನುಭವಿಸಿದೆ. ಉಗ್ರರ ನೆಲೆ ಧ್ವಂಸದಲ್ಲಿ ಜೈಶ್ ಇ ಮೊಹಮ್ಮದ್ ಕುಟುಂಬಸ್ಥರು ಹತ್ಯಯಾಗಿದ್ದರು. ಈ ಎಲ್ಲಾ ಸದಸ್ಯರು ಜೈಶ್ ಇ ಮೊಹಮ್ಮದ್ ಸದಸ್ಯರಾಗಿದ್ದರು. ಇವರಿಗೆ ಪಾಕಿಸ್ತಾನ ಸರ್ಕಾರ ಘೋಷಿಸಿದ ಪರಿಹಾರ ಮೊತ್ತ ಕೂಡ ತಲುಪಿಲ್ಲ ಎಂದು ವರದಿಯಾಗಿದೆ. ಇತ್ತ ಉಗ್ರ ಸಂಘಟನೆಗಳ ಕಟ್ಟಿ ಬೆಳೆಸಲು ಜೈಶ್ ಇ ಮೊಹಮ್ಮದ್ ಪರದಾಡುತ್ತಿದೆ. ಹೀಗಾಗಿ ಹಲವು ಮೂಲಗಳಿಂದ ಹಮ ಸಂಗ್ರಹಿಸಲು ಮುಂದಾಗಿದೆ. ಇದೀಗ ಮಹಿಳಾ ಘಟಕ ಹೊಸ ಯೋಜನೆ ಮೂಲಕ ಹಣ ಸಂಗ್ರಹಿಸಲು ಮುಂದಾಗುತ್ತಿದೆ.