ಆನೇಕಲ್ನಲ್ಲಿ ವ್ಯಕ್ತಿಯಿಂದ ವಿದ್ಯುತ್ ತಂತಿಯ ಜೊತೆ ಹುಚ್ಚಾಟ

ಬೆಂಗಳೂರು: ಮಾನಸಿಕ ಅಸ್ವಸ್ಥನಂತೆ ವರ್ತಿಸಿ ವ್ಯಕ್ತಿಯಿಂದ ಹುಚ್ಚಾಟ ಮೆರೆದಿರುವಂತಹ ಘಟನೆ ಆನೇಕಲ್ (Anekal) ತಾಲೂಕಿನ ಜಿಗಣಿಯ ಡಬಲ್ ರೋಡ್ ರಸ್ತೆಯ ಒಟಿಸಿ ಸರ್ಕಲ್ ಬಳಿ ನಡೆದಿದೆ. ಜಾರ್ಖಂಡ್ನ ರಾಂಚಿ ಮೂಲದ ರಾಜು ಮುಂಡಾನಿಂದ ಹುಚ್ಚಾಟ ಮಾಡಲಾಗಿದೆ. ಎಳನೀರು ಕುಡಿಯುತ್ತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದು, ಬಳಿಕ ಬಿಲ್ಡಿಂಗ್ ಮೇಲೆ ಏರಿ ವಿದ್ಯುತ್ ತಂತಿ ಹಿಡಿದುಕೊಳ್ಳಲು ಯತ್ನಿಸಿದ್ದಾನೆ. ಕೆಳಗೆ ಜಿಗಿಯೋದಾಗಿ ಹೇಳಿ ಕೆಲ ಸಮಯ ಆತಂಕ ಸೃಷ್ಟಿಸಿದ್ದ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದಿದ್ದ ಜಿಗಣಿ ಪೊಲೀಸರು, ಕೂಡಲೇ ಕರೆಂಟ್ ಆಫ್ ಮಾಡಿಸಿದ್ದಾರೆ.