Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮೂಡಿಗೆರೆಯಲ್ಲಿ ಸವಾರನಿಗೆ ಶಾಕ್: ಸ್ಕೂಟಿಯೊಳಗೆ ಸೇರಿಕೊಂಡ ನಾಗರಹಾವು; ದಿಗಿಲು ಬಿದ್ದು ಕ್ಷಣದಲ್ಲೇ ಇಳಿದ ಕುಡಿದ ‘ಎಣ್ಣೆ’ ನಶೆ!

Spread the love

ಚಿಕ್ಕಮಗಳೂರು: ರಸ್ತೆ ಬದಿ ವಾಹನ ನಿಲ್ಲಿಸಿ ಸ್ಕೂಟಿ ಸವಾರನೊಬ್ಬ ಎಣ್ಣೆ ಹೊಡೆಯಲು ಹೋಗಿದ್ದು, ಎಣ್ಣೆ ಹೊಡೆದು ಬರುವಷ್ಟರಲ್ಲಿ ನಾಗರಹಾವು ವೊಂದು ಸ್ಕೂಟಿಯೊಳಗೆ ಸೇರಿದ ಘಟನೆ ಮೂಡಿಗೆರೆ ಪಟ್ಟಣದ ಗಂಗನಮಕ್ಕಿಯಲ್ಲಿ ಅ.21ರ ಮಂಗಳವಾರ ನಡೆದಿದೆ.

ರಮೇಶ್ ಎಂಬವರಿಗೆ ಸೇರಿದ್ದ ಸ್ಕೂಟಿಯಲ್ಲಿ ಈ ಘಟನೆ ನಡೆದಿದ್ದು, ಸವಾರ ವಾಹನ ಹತ್ತುವಾಗ ಬಾಲ ನೋಡಿ ಭಯಗೊಂಡು, ಒಂದೇ ಕ್ಷಣಕ್ಕೆ ಕುಡಿದ ಎಣ್ಣೆ ನಶೆ ಫುಲ್‌ ಇಳಿದಿತ್ತು.

ಎಣ್ಣೆ ಏಟಲ್ಲೇ ಹಾವನ್ನು ಹೊರತೆಗೆಯಲು ಸವಾರ ಸಾಹಸ ಮಾಡುತ್ತಿದ್ದ. ಈ ವೇಳೆ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಸ್ನೇಕ್ ಆರೀಫ್ ಹಾವನ್ನು ನೋಡಿ ಸೆರೆ ಹಿಡಿದಿದ್ದಾರೆ.

10 ನಿಮಿಷಗಳ ಕಾಲ ಸ್ಕೂಟಿಯ ಮುಂಭಾಗ ಬಿಚ್ಚಿ ಹಾವನ್ನು ಸೆರೆ ಹಿಡಿದ ಸ್ನೇಕ್ ಆರೀಫ್ ಹಾವನ್ನು ಚಾರ್ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ ಎಂದು ವರದಿಯಾಗಿದೆ


Spread the love
Share:

administrator

Leave a Reply

Your email address will not be published. Required fields are marked *