Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪರೀಕ್ಷೆ ನೆಪದಲ್ಲಿ ಯುವತಿಗೆ ಅನುಚಿತ ವರ್ತನೆ, ಹೋಟೆಲ್‌ಗೆ ಕರೆದೊಯ್ಯಲು ಒತ್ತಾಯ

Spread the love

ಬೆಂಗಳೂರು: ನಗರದಲ್ಲಿ 56 ವರ್ಷದ ಚರ್ಮರೋಗ ತಜ್ಞನೊಬ್ಬನ ಮೇಲೆ 21 ವರ್ಷದ ಯುವತಿಗೆ ಚರ್ಮ ತಪಾಸಣೆ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಸದ್ಯ ಅಶೋಕ ನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಚರ್ಮರೋಗ ತಜ್ಞ 56 ವರ್ಷದ ಡಾ. ಪ್ರವೀಣ್ ಕ್ಲಿನಿಕ್‌ಗೆ 21 ವರ್ಷದ ಯುವತಿ ಶನಿವಾರ ಸಂಜೆ ಒಬ್ಬಂಟಿಯಾಗಿ ಭೇಟಿ ಕೊಟ್ಟಿದ್ದಳು. ಈ ವೇಳೆ ಇದ್ದನೇ ದುರುಪಯೋಗಪಡಿಸಿಕೊಂಡ ಆತ, ಚರ್ಮ ಸೋಂಕು ತಪಾಸಣೆ ನೆಪದಲ್ಲಿ ಆಕೆಗೆ ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಯುವತಿಯ ದೂರಿನ ಆಧಾರದ ಮೇಲೆ ಅಶೋಕನಗರ ಪೊಲೀಸರು ಡಾ. ಪ್ರವೀಣ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಒಬ್ಬಂಟಿಯಾಗಿ ಚೆಕಪ್‌ಗೆ ಹೋಗಿದ್ದೆ ಸಮಸ್ಯೆ

ಚರ್ಮದ ಸೋಂಕಿನ ಪರೀಕ್ಷೆಯ ನೆಪದಲ್ಲಿ, ವೈದ್ಯ ಮಹಿಳೆಯನ್ನು ಸುಮಾರು 30 ನಿಮಿಷಗಳ ಕಾಲ ಅನುಚಿತವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ. ಮಹಿಳೆ ವಿರೋಧಿಸಿದ್ದರೂ, ಆದರೂ ಆತ ಆಕೆಯನ್ನು ಅಪ್ಪಿ, ಮುದ್ದಾಡಿ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ.


ಆಕೆಯನ್ನು ಅಸಭ್ಯವಾಗಿ ಮುಟ್ಟುವಾಗ ವಿರೋಧಿಸದಳು ಆಗ ಆತ ಇದು ಸಹ ಪರೀಕ್ಷೆಯ ಭಾಗ ಎಂದು ಹೇಳಿದ್ದಾನೆ. ಜೊತೆಗೆ ಮಹಿಳೆಯನ್ನು ಬಟ್ಟೆ ಬಿಚ್ಚಲು ಒತ್ತಾಯಿಸಿದ್ದಾನೆ. ಬಳಿಕ ಖಾಸಗಿಯಾಗಿ ಸಮಯ ಕಳೆಯಲು ಹೋಟೆಲ್ ರೂಮ್ ಬುಕ್ ಮಾಡಿಕೊಳ್ಳುವಂತೆ ಸೂಚಿಸಿದ್ದಾನೆ ಸಾಮಾನ್ಯವಾಗಿ ಮಹಿಳೆ ತನ್ನ ತಂದೆಯೊಂದಿಗೆ ಕ್ಲಿನಿಕ್‌ಗೆ ಬರುತ್ತಿದ್ದಳು, ಆದರೆ ಆ ದಿನ ತಂದೆ ಜೊತೆ ಬರಲು ಸಾಧ್ಯವಾಗಿರಲಿಲ್ಲ ಹೀಗಾಗಿ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಆತ ಆಕೆಗೆ ಹಿಂಸಿದ್ದಾನೆ.


Spread the love
Share:

administrator

Leave a Reply

Your email address will not be published. Required fields are marked *