ಪಾಕ್-ಅಫ್ಘಾನ್ ಕದನ ವಿರಾಮದ ನಡುವೆಯೇ ಭೀಕರ ದಾಳಿ: ಪಾಕಿಸ್ತಾನಿ ಮಿಲಿಟರಿ ಕ್ಯಾಂಪ್ ಮೇಲೆ ಆತ್ಮಹತ್ಯಾ ಬಾಂಬ್ ದಾಳಿ; 7 ಯೋಧರ ಸಾವು

ಇಸ್ಲಾಮಾಬಾದ್: ಪಾಕಿಸ್ತಾನ ಅಫ್ಘಾನ್ ಗಡಿ ಬಳಿ ನಡೆದ ಮತ್ತೊಂದು ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 7 ಪಾಕಿಸ್ತಾನಿ ಯೋಧರು ಸಾವನ್ನಪ್ಪಿದ್ದಾರೆ. ಇಸ್ಲಾಮಾಬಾದ್ ಹಾಗೂ ಕಾಬೂಲ್ ನಡುವೆ ಕದನವಿರಾಮ ಘೋಷಣೆಯಾದ ಒಂದು ದಿನದ ನಂತರ ಈ ಘಟನೆ ನಡೆದಿದೆ. ಎರಡು ದೇಶಗಳ ನಡುವೆ ತೀವ್ರವಾದ ಯುದ್ಧದ ನಂತರ ದಿನಗಳ ಹಿಂದಷ್ಟೇ ಕದನ ವಿರಾಮ ಘೋಷಣೆಯಾಗಿತ್ತು. ಆದರೆ ಈಗ ಮತ್ತೆ ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ ಸಂಘಟನೆಗೆ ಸೇರಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 7 ಪಾಕಿಸ್ತಾನಿ ಯೋಧರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ವಜರಿಸ್ತಾನದ ಪಾಕ್ ಮಿಲಿಟರಿ ಕ್ಯಾಂಪ್‌ನಲ್ಲಿ ಘಟನೆ
ಉತ್ತರ ವಜರಿಸ್ತಾನದ ಮಿಲಿಟರಿ ಕ್ಯಾಂಪ್ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ನಂತರ ಈ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ 13 ಜನ ಗಾಯಗೊಂಡಿದ್ದಾರೆ. ಸ್ಪೋಟಕ ತುಂಬಿದ್ದ ವಾಹನವನ್ನು ಭಯೋತ್ಪಾದಕನೋರ್ವ ಮಿಲಿಟರಿ ಕ್ಯಾಂಪ್‌ನ ತಡೆಗೋಡೆಗೆ ಡಿಕ್ಕಿ ಹೊಡೆಸಿದ ನಂತರ ಈ ದುರಂತ ಸಂಭವಿಸಿದೆ. ಈ ವೇಳೆ ಇನ್ನೂ ಇಬ್ಬರು ಭಯೋತ್ಪಾದಕರು ಈ ಮಿಲಿಟರಿ ಕ್ಯಾಂಪ್‌ನ ಒಳಗೆ ನುಗ್ಗಲು ಯತ್ನಿಸಿದ್ದು, ಅವರನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
2021 ರಲ್ಲಿ ಅಮೆರಿಕ ನೇತೃತ್ವದ ಪಡೆಗಳ ನಿರ್ಗಮನದ ನಂತರ ಅಫ್ಘಾನಿಸ್ತಾನದಲ್ಲಿ ಮತ್ತೆ ಅಧಿಕಾರಕ್ಕೆ ಬಂದ ತಾಲಿಬಾನ್‌ನಿಂದ ಪಾಕಿಸ್ತಾನಕ್ಕೆ ಮತ್ತೊಂದು ಪ್ರಮುಖ ಕಿರಿಕಿರಿಯನ್ನುಂಟು ಮಾಡಿದೆ.
ದಕ್ಷಿಣ ಏಷ್ಯಾದ ಈ ನೆರೆಹೊರೆಯ ದೇಶಗಳು ಭಾರಿ ಕಾಳಗದಲ್ಲಿ ತೊಡಗಿದ್ದು, ಪಾಕಿಸ್ತಾನವೂ ಇಲ್ಲಿ ಹಲವು ವಾಯುದಾಳಿಯನ್ನು ನಡೆಸಿದೆ. ಈ ದಾಳಿಯಲ್ಲಿ 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಪಾಕಿಸ್ತಾನದಲ್ಲಿ ದಾಳಿಗಳನ್ನು ಹೆಚ್ಚಿಸಿರುವ ಉಗ್ರಗಾಮಿಗಳನ್ನು ಕಾಬೂಲ್ ನಿಯಂತ್ರಿಸಬೇಕೆಂದು ಇಸ್ಲಾಮಾಬಾದ್ ಒತ್ತಾಯಿಸಿದ ನಂತರ ಹಾಗೂ ಅವರು ಅಫ್ಘಾನಿಸ್ತಾನದ ಸ್ವರ್ಗದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿಕೊಂಡ ನಂತರ ಉಭಯ ದೇಶಗಳ ನಡುವೆ ಸಂಘರ್ಷ ಭುಗಿಲೆದ್ದಿತು. ಗಡಿಯಲ್ಲಿ ಅಫ್ಘಾನಿಸ್ತಾನದ ಸರಣಿ ಭಯೋತ್ಪಾದಕ ದಾಳಿಗಳಿಂದ ತಾಳ್ಮೆ ಕಳೆದುಕೊಂಡ ಪಾಕಿಸ್ತಾನವು ಪ್ರತೀಕಾರಕ್ಕಾಗಿ ವಾಯುದಾಳಿ ನಡೆಸಿತ್ತು. ಆದರೆ ಈ ಸಂಘರ್ಷವನ್ನು ಪರಿಹರಿಸಲು ಮಾತುಕತೆ ನಡೆಸಲು ದೇಶ ಸಿದ್ಧವಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಗುರುವಾರ ಹೇಳಿಕೆ ನೀಡಿದ್ದರು.
ಆದರೆ ಇತ್ತ ತಾಲಿಬಾನ್ ಈ ಆರೋಪವನ್ನು ನಿರಾಕರಿಸಿದ್ದು, ಪಾಕಿಸ್ತಾನ ಸುಳ್ಳು ಆರೋಪವನ್ನು ಹೊರಿಸುತ್ತಿದ್ದೆ ಎಂದು ಹೇಳಿದೆ.