ಚೀನಾದಲ್ಲಿ ವಿಚಿತ್ರ ಪ್ರಕರಣ: ಮೃತ ವೃದ್ಧನ ಕುಟುಂಬಕ್ಕೆ ₹7.5 ಲಕ್ಷ ಪರಿಹಾರ ನೀಡುವಂತೆ ಮಹಿಳೆಗೆ ಕೋರ್ಟ್ ಆದೇಶ

ವೈಯಕ್ತಿಕ ಜೀವನಕ್ಕೆ ಲೈಂಗಿತೆ ಎಂಬುದು ತುಂಬಾನೇ ಮುಖ್ಯ. ಇದು ಸಂಬಂಧವನ್ನು ಗಟ್ಟಿಗೊಳಿಸುವ ಒಂದು ಭಾಗವೂ ಆಗಿದೆ. ಸಂಬಂಧದಲ್ಲಿ ಸೆಕ್ಸ್ ತುಂಬಾ ಮುಖ್ಯವೇ? ಎಂದು ಕೇಳಿದ್ರೆ ಎಲ್ಲರದ್ದೂ ಒಂದೇ ಬಗೆಯ ಅಭಿಪ್ರಾಯವಾಗಿರುವುದಿಲ್ಲ. ಒಬ್ಬೊಬ್ಬರು ಒಂದೊಂದು ಉತ್ತರ ಕೊಡ್ತಾರೆ. ಕೆಲವರು ನಮ್ಮ ಸಂಬಂಧದಲ್ಲಿ ಸೆಕ್ಸ್‌ಗಿಂತ ಭಾವನೆಗೆ ಹೆಚ್ಚು ಮಹತ್ವ ಕೊಡುತ್ತೇವೆ ಎಂದು ಹೇಳಿದರೆ, ಇನ್ನೂ ಕೆಲವರು ನಮ್ಮ ಸಂಬಂಧದಲ್ಲಿ ಪ್ರೀತಿ (Love), ಮಾಧುರ್ಯ ಹೆಚ್ಚಲು ಲೈಂಗಿಕ ತೃಪ್ತಿಯೇ ಕಾರಣವೆಂದು ಹೇಳುತ್ತಾರೆ. ಇನ್ನೂ ಕೆಲವರು ಲೈಂಗಿಕ ತೃಪ್ತಿ ಕಾಣದೇ ಪರಸ್ತ್ರಿ ಸಹವಾಸದಿಂದ ಜೀವಕ್ಕೆ ಕುತ್ತು ತಂದುಕೊಳ್ತಾರೆ. ಇದಕ್ಕೆ ಚೀನಾದಲ್ಲಿ (China) ನಡೆದ ಘಟನೆಯೊಂದು ಕಾರಣವಾಗಿದೆ.

66 ವರ್ಷದ ವೃದ್ಧ ತನ್ನ ಸೀಕ್ರೆಟ್ ಗರ್ಲ್‌ಫ್ರೆಂಡ್ (Secret Girlfriend) ಜೊತೆಗೆ ರತಿಕ್ರೀಡೆಯಲ್ಲಿ ತೊಡಗಿದ್ದಾಗ ಸಾವನ್ನಪ್ಪಿರುವ ಘಟನೆ ನಡೆಸಿದೆ. ಹೀಗಾಗಿ ವೃದ್ಧನ ಕುಟುಂಬಕ್ಕೆ 7.5 ಲಕ್ಷ ಪರಿಹಾರ ಕೊಡುವಂತೆ ಕೋರ್ಟ್ ಆದೇಶ ನೀಡಿದೆ. ದಕ್ಷಿಣ ಚೀನಾದಲ್ಲಿ (South China) ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
66 ವರ್ಷದ ವೃದ್ಧ ವಯಸ್ಸಿನ ಮಿತಿ ದಾಟಿದ್ದರೂ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ. 1980ರ ದಶಕದಲ್ಲಿ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಅದೇ ಕಾರ್ಖಾನೆಯಲ್ಲಿ ಸಹೋದ್ಯೋಗಿ ಜೊತೆಗೆ ರಹಸ್ಯ ಸಂಬಂಧ ಹೊಂದಿದ್ದ. ಕೆಲ ವರ್ಷಗಳಲ್ಲೇ ಅದು ಮುರಿದುಬಿತ್ತು. 2023ರಲ್ಲಿ ಕಾರ್ಯಕ್ರಮವೊಂದರಲ್ಲಿ ಇಬ್ಬರು ಮತ್ತೆ ಭೇಟಿಯಾಗಿದ್ದರು. ಆ ಬಳಿಕ ಇಬ್ಬರ ರಹಸ್ಯ ಸಂಬಂಧ ಮತ್ತಷ್ಟು ಗಟ್ಟಿಯಾಗಿತ್ತು. ಆಗಾಗ್ಗೆ ಇಬ್ಬರು ಭೇಟಿ ಮಾಡಲು ಪ್ರಾರಂಭಿಸಿದ್ರು.
ಈ ವರ್ಷ ಜುಲೈ 24ರಂದು ಗೆಳತಿಯಿದ್ದ ಹೋಟೆಲ್‌ಗೆ ಆ ವೃದ್ಧ ಭೇಟಿ ನೀಡಿದ್ದ. ಆ ದಿನ ರಾತ್ರಿ ಇಬ್ಬರು ಒಟ್ಟಿಗೆ ಕಳೆಯಲು ನಿರ್ಧರಿಸಿದರು. ಇಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ರು. ಬಳಿಕ ಮಹಿಳೆ ಎಚ್ಚರವಾದಾಗ ವೃದ್ಧ ನಿರ್ಜೀವವಾಗಿ ಬಿದ್ದಿದ್ದ. ಕೂಡಲೇ ಹೋಟೆಲ್ ಸಿಬ್ಬಂದಿಗೆ ತಿಳಿಸಲಾಯಿತು. ವೈದ್ಯರಿಗೂ ಮಾಹಿತಿ ನೀಡಲಾಯ್ತು. ವೈದ್ಯರು ಪರೀಕ್ಷಿಸಿ ವೃದ್ಧ ಸಾವನ್ನಪ್ಪಿರುವುದಾಗಿ ದೃಢಪಡಿಸಿದರು.
ಮಹಿಳೆ 7.5 ಲಕ್ಷ ಪರಿಹಾರ ಕೊಡುವಂತೆ ಕೋರ್ಟ್ ಆದೇಶ
ವೃದ್ಧನ ಸಾವಿನ ವಿಚಾರ ತಿಳಿದ ಕುಟುಂಬಸ್ಥರು ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮೊದಲು 77,000 ಡಾಲರ್ (67 ಲಕ್ಷ ರೂ.) ಪರಿಹಾರಕ್ಕೆ ಸೂಚಿಸಿದ್ದ ಕೋರ್ಟ್, ಬಳಿಕ ಮಹಿಳೆ ಕೋರಿಗೆ ಮೇರೆಗೆ 7.5 ಲಕ್ಷಕ್ಕೆ ಇಳಿಕೆ ಮಾಡಿತು. ಅಲ್ಲದೇ ವ್ಯಕ್ತಿಯ ಸಾವಿಗೆ ಆತನ ಆರೋಗ್ಯ ಸಮಸ್ಯೆಗಳೇ ಕಾರಣ, ಯಾರೂ ಹೊಣೆಗಾರರಲ್ಲ ಎಂದು ತೀರ್ಪು ಪ್ರಕಟಿಸಿತು.