ಉಳ್ಳಾಲದಲ್ಲಿ ಅಸ್ವಾಭಾವಿಕ ಸಾವು: ಚಿನ್ನದ ಸರ ಕಳ್ಳತನ ಪ್ರಕರಣದ ಆರೋಪಿ ನಿಯಾಫ್ನ ಮೃತದೇಹ ಬಸ್ ನಿಲ್ದಾಣದಲ್ಲಿ ಪತ್ತೆ

ಉಳ್ಳಾಲ: ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ ಮುದುಂಗಾರುಕಟ್ಟೆ ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಮೃತನು ಅಸ್ವಾಭಾವಿಕವಾಗಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ತಜ್ಞರ ತಂಡಗಳಾದ ಸೊಕೊ ತಂಡ, ಶ್ವಾನದಳ ಮತ್ತು ಬೆರಳಚ್ಚು ತಂಡಕ್ಕೆ ಮಾಹಿತಿ ನೀಡಿದ್ದು, ಮತ್ತು ಸದರಿ ತಂಡಗಳು ಘಟನೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಪಾತೂರು ಜುಮಾ ಮಸೀದಿ ಸಮೀಪದ ನಿವಾಸಿ ನಿಯಾಫ್ (28) ಎಂಬವರ ಮೃತದೇಹ ಆಗಿದ್ದು, ಅ.12 ರಂದು ಸಂಜೆ ಮನೆಯಿಂದ ನಾಪತ್ತೆಯಾದವರು ವಾಪಸ್ಸು ಬಾರದೇ ನಾಪತ್ತೆಯಾಗಿದ್ದರು. ನಿಯಾಫ್ ವರ್ಷದ ಹಿಂದೆ ಮಹಿಳೆಯ ಚಿನ್ನದ ಸರ ಕಿತ್ತು ನಾಪತ್ತೆಯಾದ ಪ್ರಕರಣದಲ್ಲಿ ಆರೋಪಿಯಾಗಿ ಜೈಲಿನಿಂದ ಬಿಡುಗಡೆಗೊಂಡಿದ್ದನು. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.