ಪ್ರೇಮಕ್ಕೆ ಧರ್ಮದ ಅಡ್ಡಿ- ಅಂಬೇಡ್ಕರ್ ಪ್ರತಿಮೆ ಮುಂದೆ ಹಿಂದೂ-ಮುಸ್ಲಿಂ ಜೋಡಿಯ ಮಹತ್ವದ ನಿರ್ಧಾರ!

ಮನೆಯವರ ತೀವ್ರ ವಿರೋಧದ ನಡುವೆ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಪ್ರೀತಿಸಿ ವಿವಾಹವಾಗಿರುವ ಪ್ರಸಂಗ ನಡೆದಿದೆ.

ಕೋಲಾರ: ಪ್ರಸ್ತುತ ದಿನಗಳಲ್ಲಿ ಪ್ರೀತಿಸಿ ವಿವಾಹವಾಗುವುದಕ್ಕೆ ಹಲವು ರೀತಿಯ ತೊಂದರೆ ಉಂಟಾಗುವುದುನ್ನು ನಾವು ನೋಡಿದ್ದೇವೆ. ಪ್ರೀತಿಸಿದ ಜೋಡಿ ಅಂತರ ಜಾತಿಯವರಾಗಿದ್ದರೂ ಮನೆಯವರು ಒಪ್ಪದ ಎಷ್ಟೋ ಘಟನೆಗಳನ್ನು ನಾವು ನೋಡಿದ್ದೇವೆ. ಇನ್ನೇನಾದರೂ ಅಂತರ್‌ಧರ್ಮೀಯರ ವಿವಾಹವೆಂದ್ರೆ ಮನೆಯವರು ಒಪ್ಪಿಗೆ ಕೊಡೋದು ಸಾಧ್ಯವೇ ಇಲ್ಲ ಎನ್ನಯವಂತಹ ಸ್ಥಿತಿ ಇದೆ. ಅದರಂತೆ ಮನೆಯವರ ತೀವ್ರ ವಿರೋಧದ ನಡುವೆ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಪ್ರೀತಿಸಿ ವಿವಾಹವಾಗಿರುವ ಪ್ರಸಂಗ ನಡೆದಿದೆ.
ಕೋಲಾರದಲ್ಲಿ ಹಿಂದೂ-ಮುಸ್ಲಿಂ ವಿವಾಹ
ಹೌದು, ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿ ಮನೆಯವರ ತೀವ್ರ ವಿರೋಧದ ನಡುವೆಯೂ ದಲಿತ ಸಂಘಟನೆಗಳ ಸಹಕಾರದೊಂದಿಗೆ ವಿವಾಹವಾಗಿರುವ ಅಪರೂಪದ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚೌಡದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
