Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಸ್ತೆ ಬದಿಯಲ್ಲಿ ಕಾರು ರಿಪೇರಿ ಮಾಡುತ್ತಿದ್ದ ಮೆಕ್ಯಾನಿಕ್‌ಗೆ ಡಿಕ್ಕಿ: ಬಂಟ್ವಾಳ ಬಿ.ಸಿ. ರೋಡ್‌ನಲ್ಲಿ ಜಬ್ಬಾರ್ (33) ಸ್ಥಳದಲ್ಲೇ ಸಾವು!

Spread the love

ಬಂಟ್ವಾಳ : ಕಾರು ರಿಪೇರಿ ಮಾಡುತ್ತಿರುವ ವೇಳೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಮೆಕ್ಯಾನಿಕ್ ಸಾವನಪ್ಪಿದ ಘಟನೆ ಬಿ.ಸಿ .ರೋಡ್ ಗಾಣದಪಡ್ಪುನಲ್ಲಿ ನಡೆದಿದೆ.
ಮೃತರನ್ನು ಬೋಳಂತೂರು ನಿವಾಸಿ ಜಬ್ಬಾರ್( 33) ಎಂದು ಗುರುತಿಸಲಾಗಿದೆ.

ಅವಿವಾಹಿತನಾಗಿರುವ ಜಬ್ಬಾರ್ ಅವರು ಗಾಣದಪಡ್ಪು ಶಿವಗಣೇಶ್ ಬ್ಯಾಟರಿ ಅಂಗಡಿಯಲ್ಲಿ ಕಾರ್ಮಿಕನಾಗಿದ್ದು, ಆಟೋ ಇಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದರು. ಇಂದು ಹೆದ್ದಾರಿಯ ಬದಿಯಲ್ಲಿ ಕಾರೊಂದಕ್ಕೆ ಹಾರ್ನ್ ಅಳವಡಿಸುತ್ತಿದ್ದ ವೇಳೆ ವೇಣೂರು ಮೂಲದ ವ್ಯಕ್ತಿಯೋರ್ವ ಬಂಟ್ವಾಳ ಬೈಪಾಸ್ ಕಡೆಯಿಂದ ಕಾರಿನಲ್ಲಿ ಬಂದು ಢಿಕ್ಕಿ ಹೊಡೆದಿದ್ದಾರೆ.

ಡಿಕ್ಕಿಯ ರಭಸಕ್ಕೆ ಜಬ್ಬಾರ್ ಗಂಭೀರವಾಗಿ ಗಾಯಗೊಂಡಿದ್ದು, ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *