Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗಾಜಾ ಯುದ್ಧ ಅಂತ್ಯ ಟ್ರಂಪ್ ಘೋಷಣೆ ಬೆನ್ನಲ್ಲೇ ಬಿಗ್ ಬ್ರೇಕಿಂಗ್: ಇಸ್ರೇಲ್‌ನ 7 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್; ರೆಡ್‌ಕ್ರಾಸ್‌ಗೆ ಹಸ್ತಾಂತರ

Spread the love

ಟೆಲ್‌ಅವಿವ್: ಗಾಜಾದಲ್ಲಿ (Gaza) ಯುದ್ಧ ಅಂತ್ಯಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಣೆ ಬೆನ್ನಲ್ಲೇ ಮೊದಲ ಹಂತವಾಗಿ ಇಸ್ರೇಲ್‌ನ (Israel) 7 ಮಂದಿ ಒತ್ತೆಯಾಳುಗಳನ್ನ ಹಮಾಸ್ (Hamas) ಬಿಡುಗಡೆ ಮಾಡಿದೆ.

ಇಸ್ರೇಲ್-ಹಮಾಸ್ ಕದನ ವಿರಾಮದ ಭಾಗವಾಗಿ ಮೊದಲ ಹಂತದಲ್ಲಿ 7 ಒತ್ತೆಯಾಳುಗಳನ್ನು ಹಮಾಸ್ ರೆಡ್‌ಕ್ರಾಸ್‌ಗೆ ಹಸ್ತಾಂತರಿಸಿದೆ. ಆದರೆ ಅವರ ಸದ್ಯದ ಸ್ಥಿತಿಯ ಬಗ್ಗೆ ಮಾಹಿತಿ ಇಲ್ಲ. ಜೊತೆಗೆ ಇಸ್ರೇಲ್ ವಶದಲ್ಲಿರುವ 1,900ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಕೈದಿಗಳಿಗೆ ಬದಲಾಗಿ 20 ಒತ್ತೆಯಾಳುಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು ಎಂದು ಹಮಾಸ್ ಹೇಳಿದೆ. ಅದರಂತೆ 20 ಮಂದಿ ಪೈಕಿ 7 ಒತ್ತೆಯಾಳುಗಳನ್ನ ಬಿಡುಗಡೆಗೊಳಿಸಲಾಗಿದೆ.

ಹಮಾಸ್ ಬಿಡುಗಡೆಗೊಳಿಸಿರುವ ಒತ್ತೆಯಾಳುಗಳು ಸದ್ಯ ರೆಡ್‌ಕ್ರಾಸ್ ನಿಯಂತ್ರಣದಲ್ಲಿದ್ದಾರೆ ಎಂದು ಇಸ್ರೇಲ್ ಮಾಧ್ಯಮಗಳು ಬಹಿರಂಗಪಡಿಸಿದ್ದು, ಒತ್ತೆಯಾಳುಗಳ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಗಾಜಾದಲ್ಲಿ ಯುದ್ಧ ಅಂತ್ಯಗೊಂಡು, ಮಧ್ಯಪ್ರಾಚ್ಯದಲ್ಲಿ ಈಗ ಶಾಂತಿ ನೆಲೆಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಹಮಾಸ್ ಒತ್ತೆಯಾಳುಗಳ ಬಿಡುಗಡೆಗೂ ಮುನ್ನ ಟ್ರಂಪ್ ಪಶ್ಚಿಮ ಏಷ್ಯಾಕ್ಕೆ ತೆರಳಿದ್ದಾರೆ. ಇದಕ್ಕೂ ಮುನ್ನ ಏರ್‌ಫೋರ್ಸ್ ಒನ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ಮುಗಿದಿದೆ ಎಂದು ತಿಳಿಸಿದ್ದರು.

ಇದೊಂದು ವಿಶೇಷ ಕಾರ್ಯಕ್ರಮ, ಸಹಜವಾಗಿ ಒಂದು ಕಡೆ ಸಂತೋಷ ಇದ್ರೆ, ಮತ್ತೊಂದು ಕಡೆ ದುಃಖ ಇದೆ. ಆದ್ರೆ ಎಲ್ಲರೂ ಅಚ್ಚರಿಯಾಗಿರುವುದು, ರೋಮಾಂಚನಗೊಂಡಿರುವುದು ಇದೇ ಮೊದಲು. ಆದ್ರೆ ಯುದ್ಧ ನಿಲ್ಲಿಸುವ ಭಾಗವಾಗಿರುವುದು ನಿಜಕ್ಕೂ ನನಗೆ ಗೌರವ. ಇನ್ಮುಂದೆ ನಾವು ಹಿಂದೆಂದೂ ಕಾಣದ ಅದ್ಭುತ ಕ್ಷಣಗಳನ್ನು ಕಳೆಯಲಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದ್ದರು.

ಈ ಯುದ್ಧ ನಿಲ್ಲಿಸಿದ್ದರಿಂದ ಯಹೂದಿಗಳು, ಮುಸ್ಲಿಮರು ಅಥವಾ ಅರಬ್ ದೇಶಗಳಾಗಿರಬಹುದು ಎಲ್ಲರೂ ಸಂತೋಷವಾಗಿದ್ದಾರೆ. ಇದರ ಬಳಿಕ ನಾವು ಈಜಿಪ್ಟ್ಗೆ ಹೋಗ್ತಿದ್ದೀವಿ. ಶಕ್ತಿಶಾಲಿ ಮತ್ತು ದೊಡ್ಡ ದೇಶಗಳ ನಾಯಕರನ್ನು ಹಾಗೂ ಅತ್ಯಂತ ಶ್ರೀಮಂತ ದೇಶಗಳನ್ನ ಭೇಟಿಯಾಗುತ್ತೇವೆ. ಅವರೆಲ್ಲರೂ ಈ ಈ ಒಪ್ಪಂದದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದ್ದರು.

ಯುದ್ಧ ನಿಲ್ಲಿಸೋದ್ರಲ್ಲಿ ನಾನು ನಿಪುಣ:
ಇದಕ್ಕೂ ಮುನ್ನ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಸೇರಿದಂತೆ ವಿಶ್ವದ ಹಲವು ಸಘರ್ಷಗಳನ್ನು ಪರಿಹರಿಸುವಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದಾಗಿ ಟ್ರಂಪ್ ಮತ್ತೊಮ್ಮೆ ತಮಗೆ ತಾವೇ ಬೆನ್ನುತಟ್ಟಿಕೊಂಡಿದ್ದಾರೆ. ಜೊತೆಗೆ ಇದನ್ನೆಲ್ಲ ನೊಬೆಲ್ ಶಾಂತಿ ಪ್ರಶಸ್ತಿಗಾಗಿ ಮಾಡಿಲ್ಲ ಎಂದು ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಯೋಚಿಸಿ. ಕೆಲ ಯುದ್ಧಗಳು 31, 32, 37 ವರ್ಷಗಳ ಕಾಲ ನಡೆದವು. ಲಕ್ಷಾಂತರ ಜನರು ಸಾವನ್ನಪ್ಪಿದ್ರು. ಆದ್ರೆ ನಾನು ಒಂದು ದಿನದ ಬಳಗಾಗಿ ಯುದ್ಧ ಪರಿಹರಿಸಿದೆ. ವ್ಯಾಪಾರ ಮತ್ತು ಸುಂಕದAತಹ ಆರ್ಥಿಕ ಕ್ರಮಗಳ ಮೂಲಕ ಸಂಘರ್ಷ ಬಗೆಹರಿಸಿದ್ದೇನೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ತಡೆಯಲು, ನಿಮ್ಮ ಬಳಿ ಪರಮಾಣು ಶಸ್ತ್ರಾಸ್ತ್ರಗಳಿವೆ ಅಂತ ನಾನು ಅವರಿಗೆ ಹೇಳಿದ್ದೆ. ನೀವಿಬ್ಬರೂ ಯುದ್ಧಕ್ಕೆ ಹೋದ್ರೆ ನಿಮ್ಮ ಮೇಲೆ 100%, 150% ಮತ್ತು 200% ಸುಂಕ ವಿಧಿಸುತ್ತೇನೆ ಅಂತ ಎಚ್ಚರಿಕೆ ಕೊಟ್ಟಿದ್ದೆ. ಸುಂಕದ ಎಚ್ಚರಿಕೆ ನೀಡಿದ 24 ಗಂಟೆಗಳಲ್ಲಿ ಯುದ್ಧ ನಿಲ್ಲಿಸಿದೆ. ಇಲ್ಲದಿದ್ದರೆ ಈ ಯುದ್ಧ ನಿಲ್ಲುತ್ತಿರಲಿಲ್ಲ ಎಂದು ಬೀಗಿದ್ದಾರೆ.

ಪಾಕ್-ಅಫ್ಘಾನ್ ಯುದ್ಧವನ್ನೂ ನಿಲ್ಲಿಸುವೆ:
ನಾನು ಯುದ್ಧಗಳನ್ನು ಪರಿಹರಿಸುವಲ್ಲಿ ನಿಪುಣ. ಇಸ್ರೇಲ್-ಗಾಜಾ ಕದನ ವಿರಾಮ ನಾನು ಪರಿಹರಿಸಿದ 8 ಯುದ್ಧ. ಈಗ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಸಂಘರ್ಷ ನಡೆಯುತ್ತಿದೆ. ನಾನು ಹಿಂದಿರುಗುವಾಗ ಅದನ್ನೂ ಪರಿಹರಿಸುತ್ತೇನೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ.

ನೊಬೆಲ್ ಶಾಂತಿ ಪ್ರಶಸ್ತಿ ಗೆಲ್ಲುವುದು ತನ್ನ ಗುರಿಯಲ್ಲ. ಆದ್ರೆ ಯುದ್ಧಗಳನ್ನು ನಿಲ್ಲಿಸುವುದು ನನಗೆ ಗೌರವ. 2025 ರಲ್ಲಿ ಇನ್ನೂ ಪ್ರಮುಖ ಕೆಲಸಗಳನ್ನು ಮಾಡಲಾಗುತ್ತದೆ. ಜೀವಗಳನ್ನು ಉಳಿಸುವ ಉದ್ದೇಶದಿಂದ ನಾನು ಈ ಕೆಲಸಗಳನ್ನು ಮಾಡಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *