Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಸ್‌ನಲ್ಲಿ ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಇತ್ತೀಚಿನ ಘಟನೆ ಮತ್ತು ಆರೋಪಿಯ ಬಂಧನ

Spread the love

ಬೆಂಗಳೂರು: ಬೆಂಗಳೂರಿನಲ್ಲಿ ದಿನೇ ದಿನೇ ಕೊಲೆ, ಸುಲಿಗೆ ಮತ್ತು ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚುತ್ತಲೇ ಇವೆ. ಯುವತಿಯರಂತೂ ರಾತ್ರಿ ಮಾತ್ರವಲ್ಲದೇ ಹಗಲಿನಲ್ಲೂ ಮನೆಯಿಂದ ಹೊರ ಬೀಳಲು 100 ಬಾರಿ ಯೋಚಿಸಬೇಕು ಎಂಬಂತಾಗಿದೆ. ಇದೀಗ ನಗರದಲ್ಲಿ ಕೆಎಸ್ಆರ್ಟಿಸಿ ಬಸ್​ನಲ್ಲಿ ಪ್ರಯಾಣ ಮಾಡುತ್ತಿದ್ದ ವೈದ್ಯೆಯೊಬ್ಬರಿಗೆ ಕಾಮುಕನೊಬ್ಬ ಲೈಂಗಿಕ ಕಿರುಕುಳ ಕೊಟ್ಟಿರುವ ಘಟನೆ ವರದಿಯಾಗಿದೆ. ಬಸ್​ನಲ್ಲಿ ಪಕ್ಕದಲ್ಲಿ ಕುಳಿತು ಅಸಭ್ಯ ವರ್ತನೆ ಮಾಡಿದ ವ್ಯಕ್ತಿಯನ್ನು ಪ್ರಯಾಣಿಕರೆಲ್ಲರೂ ಸೇರಿ ಪೊಲೀಸ್​ ಕೈಗೊಪ್ಪಿಸಿದ್ದಾರೆ.

ಕಾಮುಕನನ್ನು ಪೊಲೀಸರ ಕೈಗೊಪ್ಪಿಸಿದ ಪ್ರಯಾಣಿಕರು

ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಕೆಎಸ್ಆರ್ಟಿಸಿ ಬಸ್ ನಲ್ಲಿ ಬರುತ್ತಿದ್ದ ವೈದ್ಯೆಗೆ ಕಾಮುಕನೊಬ್ಬ ಕಿರುಕುಳ ನೀಡಿದ್ದಾನೆ. ದೊಡ್ಡಬಳ್ಳಾಪುರದಿಂದ ವೈದ್ಯೆಯಿದ್ದ ಕೆಎ -04-ಎಫ್ -1543 ಬಸ್​ ಹತ್ತಿದ್ದ ಫಿರೋಝ್ ಖಾನ್ ಎಂಬಾತ, ಅವರನ್ನು ಕಂಡು ಪಕ್ಕದಲ್ಲಿಯೇ ಬಂದು ಕುಳಿತಿದ್ದ. ನಂತರ ಖಾಸಗಿ ಭಾಗಕ್ಕೆ ಸ್ಪರ್ಶಿಸಿ ಕಾಮುಕತೆ ಮೆರೆದಿದ್ದ. ವೈದ್ಯೆ ಎಷ್ಟೇ ಅವಾಯ್ಡ್ ಮಾಡಿದರೂ ಮತ್ತೆ ಮತ್ತೆ ಕಿರುಕುಳ ಕೊಡುತ್ತಿದ್ದ. ಅವನ ಕಾಟದಿಂದ ಬೇಸತ್ತ ಮಹಿಳೆ ತನ್ನ ಸಹೋದರನಿಗೆ ಮತ್ತು ಬಸ್ ಡ್ರೈವರ್ ಗೆ ಮಾಹಿತಿ ನೀಡಿದ್ದಾರೆ.

ಇದನ್ನು ತಿಳಿದ ವೈದ್ಯೆಯ ಸಹೋದರ ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟ ಕಾಮುಕನನ್ನು ಪ್ರಯಾಣಿಕರು ಮತ್ತು ಕಂಡಕ್ಟರ್ ಸೇರಿ ಹಿಡಿದಿದ್ದು, ಸಂಜಯ್ ನಗರದ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯ ವಿರುದ್ಧ ಕಿರುಕುಳಕ್ಕೊಳಗಾದ ವೈದ್ಯೆ ದೂರು ನೀಡಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *