ದೀಪಾವಳಿ 2025: ಮುಹೂರ್ತ ಟ್ರೇಡಿಂಗ್ ದಿನಾಂಕ, ಸಮಯ ಘೋಷಣೆ

ಮುಂಬೈ: ದೀಪಾವಳಿ ಸಂಭ್ರಮ ಶುರುವಾಗಿದೆ. ಅಕ್ಟೋಬರ್ 20 ರಿಂದ 22ರ ವರೆಗೆ ದೀಪಾವಳಿ ಹಬ್ಬದ ಸಂಭ್ರಮ. ದೇಶದೆಲ್ಲೆಡೆ ಅದ್ಧೂರಿಯಾಗಿ ದೀಪಾವಳಿ ಆಚರಿಸಲಾಗುತ್ತದೆ. ದೀವಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಇದೀಗ ಭಾರತೀಯ ಷೇರುಮಾರುಕಟ್ಟೆ ( NSE) ಮುಹೂರ್ತ ಟ್ರೇಡಿಂಗ್ ದಿನಾಂಕ, ಸಮಯ ಘೋಷಿಸಿದೆ. ಈ ಶುಭಘಳಿಗೆಯಲ್ಲಿ ಹಲವು ಹೂಡಿಕೆದಾರರು ಷೇರು ವ್ಯವಹಾರ ಮಾಡುವ ಮೂಲಕ ಭಾರಿ ಲಾಭ ಪಡೆದುಕೊಳ್ಳುತ್ತಾರೆ. ಇಡೀ ವರ್ಷ ಲಾಭದಾಯಕವಾಗಲಿ ಎಂದು ಶುಭ ಮೂಹೂರ್ತದಲ್ಲಿ ಹೊಸ ಹರುಪಿನೊಂದಿಗೆ ಟ್ರೇಡಿಂಗ್ ಮಾಡಲಾಗುತ್ತದೆ.

ಯಾವಾಗ ಮಹೂರ್ತ ಟ್ರೇಡಿಂಗ್?
ನ್ಯಾಷನಲ್ ಸ್ಟಾಕ್ ಎಕ್ಸೇಂಜ್ (NSE) ದೀಪಾವಳಿಯ ಶುಭಮುಹೂರ್ತ ಟ್ರೇಡಿಂಗ್ ದಿನಾಂಕ ಹಾಗೂ ಸಮಯ ಘೋಷಿಸಿದೆ. ದೀಪಾವಳಿಗೆ ಭಾರತೀಯ ಷೇರುಮಾರುಕಟ್ಟೆ ಬಂದ್ ಆದರೂ ಈ ವಿಶೇಷ ಮಹೂರ್ತ ಟ್ರೇಡಿಂಗ್ ಸಮಯದಲ್ಲಿ ತೆರೆದುಕೊಳ್ಳಲಿದೆ. ಹೀಗಾಗಿ ಈ ಸಮಯದಲ್ಲಿ ಭಾರಿ ವ್ಯವಹಾರ ನಡೆಯುತ್ತದೆ.
- ಮಹೂರ್ತ ಟ್ರೇಡಿಂಗ್ ದಿನಾಂಕ: ಅಕ್ಟೋಬರ್ 21 (ದೀಪಾವಳಿ)
- ಮಹೂರ್ತ ಟ್ರೇಡಿಂಗ್ ಸಮಯ:ಮಧ್ಯಾಹ್ನ 1.45 ರಿಂದ 2.45 PM
ಏನಿದು ಮುಹೂರ್ತ ಟ್ರೇಡಿಂಗ್?
ಮುಹೂರ್ತ ಟ್ರೇಡಿಂಗ್ ವರ್ಷದಲ್ಲಿ ಒಂದು ದಿನ ಮಾತ್ರ. ಅದು ಪ್ರತಿ ವರ್ಷ ದೀಪಾವಳಿ ಸಮಯದಲ್ಲಿ ನಡೆಯುತ್ತದೆ. ಹಿಂದೂ ಪಂಚಾಂಗ ಪ್ರಕಾರ, ದೀಪಾವಳಿ ಅತ್ಯಂತ ಮಹತ್ವದ ಹಬ್ಬ. ಈ ವೇಳೆ ಭಾರತೀಯ ಷೇರುಮಾರುಕಟ್ಟೆಯ NSE ಹಾಗೂ BSE ಎರಡೂ ಕೂಡ ಮುಹೂರ್ತ ಟ್ರೇಡಿಂಗ್‌ಗೆ ಅನುವು ಮಾಡಿಕೊಡುತ್ತದೆ. ಇದು ಸ್ಪೆಷಲ್ ಟ್ರೇಡಿಂಗ್ ವಿಂಡೋ, ಹೂಡಿಕೆದಾರರು ಹಿಂದೂ ಸಂಪ್ರದಾಯ ಪ್ರಕಾರ ಲಕ್ಷ್ಮಿ ಸೇರಿದಂತೆ ದೇವರುಗಳಿಗೆ ಪೂಜೆ ಮಾಡಿ ಶುಭ ಮುಹೂರ್ತದಲ್ಲಿ ಟ್ರೇಡಿಂಗ್ ಮಾಡುತ್ತಾರೆ. ಈ ಮೂಲಕ ವರ್ಷವಿಡಿ ಲಾಭದಾಯಕವಾಗಲಿ ಎಂಬ ನಂಬಿಕೆಯೊಂದಿಗೆ ಟ್ರೇಡಿಂಗ್ ಮಾಡಲಾಗುತ್ತದೆ.ಶುಭ ಘಳಿಗೆ, ಶುಭ ದಿನಾಂಕದಲ್ಲಿ ಈ ಟ್ರೇಡಿಂಗ್ ನಡೆಯುತ್ತದೆ.
ದೀಪಾವಳಿ ದಿನ ಬಂದ್ ಆದರೂ ಮುಹೂರ್ತ ಟ್ರೇಡಿಂಗ್ ವೇಳೆ ಓಪನ್
ಭಾರತೀಯ ಷೇರುಮಾರುಕಟ್ಟೆ ದೀಪಾವಳಿ ಹಬ್ಬದ ದಿನ ಬಂದ್ ಇರಲಿದೆ. ಯಾವುದೇ ಟ್ರೇಡಿಂಗ್ ಇರುವುದಿಲ್ಲ. ಆದರೆ ಮುಹೂರ್ತ ಟ್ರೇಡಿಂಗ್ ವೇಳೆ ಅಂದರೆ ಅಕ್ಟೋಬರ್ 21ರ ಮಧ್ಯಾಹ್ನ 1.45 ರಿಂದ 2.45ರ ಒಂದು ಗಂಟೆ ಕಾಲ ಮಾತ್ರ ತೆರೆಯಲಿದೆ. ಈ ವೇಳೆ ವಿಶೇಷ ಟ್ರೇಡಿಂಗ್ ವಿಂಡೋ ತೆರೆದುಕೊಳ್ಳಲಿದೆ. ಹಲವರು ಪೂಜೆ ಮಾಡಿ ಟ್ರೇಡಿಂಗ್ ಶುರು ಮಾಡುತ್ತಾರೆ. ಉಪವಾಸ ಸೇರಿದಂತೆ ವೃತ ಕೈಗೊಂಡು ಟ್ರೇಡಿಂಗ್ ಮಾಡುತ್ತಾರೆ. ಈ ಶುಭ ಘಳಿಗಿಗೆ ಇದೀಗ ಹೂಡಿಕೆದಾರರು ಕಾಯುತ್ತಿದ್ದಾರೆ. ದೀಪಾವಳಿ ಹಬ್ಬದ ಸಮಯ ರಜೆ ನಡುವೆ ಹಬ್ಬದ ಬೋನಸ್ ಪಡೆಯಲು ಟ್ರೇಡರ್ಸ್ ಕಾತರರಾಗಿದ್ದಾರೆ.
ಮುಹೂರ್ತ ಟ್ರೇಡಿಂಗ್ ವೇಳಾಪಟ್ಟಿ (NSE)
- ಬ್ಲಾಕ್ ಡೀಲ್ ಸೆಶನಿ : 1.15pm ನಿಂದ 1.30 pm
- ಪ್ರೇ ಒಪನ್ ಸೆಶನ್ : 1.30pm ನಿಂದ 1.45 pm
- ಸಾಮಾನ್ಯ ಮಾರ್ಕೆಟ್ ಸೆಶನ್: 1.45 pm ನಿಂದ 2.45 pm
- ವಿಶೇಷ ಪ್ರೀ ಒಪನ್ ಸೆಶನ್ : 1.30 pm ರಿಂದ 2.15 pm
- ಸಾಮಾನ್ಯ ಮಾರ್ಕೆಟ್ ಒಪನ್(ಸ್ಟಾಕ್ಸ್ ) 2:30 pm ರಿಂದ 2:45 pm ತನಕ
- ಕಾಲ್ ಆಕ್ಷನ್ ಸೆಶನ್ : 1:50 pm ರಿಂದ 2:35 pm ತನಕ
- ಕ್ಲೋಸಿಂಗ್ ಸೆಶನ್ : 2.55 pm ರಿಂದ 2.05 pm ತನಕ
- ಟ್ರೇಡ್ ಮಾಡಿಫಿಕೇಶನ್ ಕಟ್ ಆಫ್ : 1.45 pm ರಿಂದ 3.15 pm