Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಯತ್ನ: “ನನಗೆ ಯಾವುದೇ ವಿಷಾದವಿಲ್ಲ, ಇದು ಸನಾತನ ಧರ್ಮದ ಅವಮಾನಕ್ಕೆ ಪ್ರತಿಕ್ರಿಯೆ” ಎಂದ ವಕೀಲ ರಾಕೇಶ್ ಕಿಶೋರ್

Spread the love

ಮಧ್ಯಪ್ರದೇಶದ ಖಜುರಾಹೊ ದೇವಾಲಯಗಳಲ್ಲಿ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಸಲ್ಲಿಸಲಾದ ಅರ್ಜಿಯ ಕುರಿತು ಸೆಪ್ಟೆಂಬರ್ 16 ರಂದು ನ್ಯಾಯಾಲಯವು ನೀಡಿದ ಆದೇಶದ ಆಧಾರದ ಮೇಲೆ ತಮ್ಮ ಪ್ರತಿಕ್ರಿಯೆ ಎಂದು ಕಿಶೋರ್ ಹೇಳಿದ್ದಾರೆ.
ನವದೆಹಲಿ (ಅ.7): ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿ ಅಮಾನತಾಗಿರುವ ಹಿರಿಯ ವಕೀಲ ರಾಕೇಶ್ ಕಿಶೋರ್, ತಮ್ಮ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲ ಮತ್ತು ಈ ಘಟನೆ ಗವಾಯಿ ಅವರು ಸನಾತನ ಧರ್ಮದ ವಿರುದ್ಧ ನಿರಂತರ ನಿಲುವು ತಾಳಿದ್ದಕ್ಕೆ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದ್ದಾರೆ.

ನ್ಯಾಯಾಲಯದ ಕಲಾಪದ ವೇಳೆ ನಡೆದ ಅತ್ಯಂತ ಕೆಟ್ಟ ಘಟನೆಯ ಸಂದರ್ಭದಲ್ಲಿ ಯಾವುದೇ ಮುಜುಗರಕ್ಕೆ ಒಳಗಾಗದ ಸಿಜೆಐ, ನ್ಯಾಯಾಲಯದ ಅಧಿಕಾರಿಗಳು ಮತ್ತು ನ್ಯಾಯಾಲಯದ ಒಳಗೆ ಇದ್ದ ಭದ್ರತಾ ಸಿಬ್ಬಂದಿಗೆ ಇದನ್ನು “ನಿರ್ಲಕ್ಷಿಸಿ” ಮತ್ತು ತಪ್ಪಿತಸ್ಥ ವಕೀಲರನ್ನು ಎಚ್ಚರಿಕೆ ನೀಡಿ ಬಿಡುಗಡೆ ಮಾಡುವಂತೆ ಕೇಳಿಕೊಂಡರು.

ಮಧ್ಯಪ್ರದೇಶದ ಖಜುರಾಹೊ ದೇವಾಲಯಗಳಲ್ಲಿ ವಿಷ್ಣುವಿನ ವಿಗ್ರಹವನ್ನು ಪುನಃಸ್ಥಾಪಿಸಲು ಸಲ್ಲಿಸಲಾದ ಅರ್ಜಿಯ ಕುರಿತು ಸೆಪ್ಟೆಂಬರ್ 16 ರಂದು ನ್ಯಾಯಾಲಯವು ನೀಡಿದ ಆದೇಶದ ಆಧಾರದ ಮೇಲೆ ತಮ್ಮ ಪ್ರತಿಕ್ರಿಯೆ ಎಂದು ಕಿಶೋರ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲೇ ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ವಕೀಲ ರಾಕೇಶ್‌ ಕಿಶೋರ್‌ ಹಿನ್ನೆಲೆಯೇನು?
ನನಗೆ ಯಾವುದೇ ವಿಷಾದವಿಲ್ಲ
“ಸೆಪ್ಟೆಂಬರ್ 16 ರಂದು ಸಿಜೆಐ ನ್ಯಾಯಾಲಯದಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು. ಸಿಜೆಐ ಅದನ್ನು ಅಪಹಾಸ್ಯ ಮಾಡಿ, ‘ಹೋಗಿ ವಿಗ್ರಹವನ್ನು ಪ್ರಾರ್ಥನೆ ಮಾಡಿಕೊಳ್ಳಿ ಮತ್ತು ಅದರ ಸ್ವಂತ ತಲೆಯನ್ನು ಪುನಃಸ್ಥಾಪಿಸಲು ಹೇಳಿ’ ಎಂದಿದ್ದರು. ನಮ್ಮ ಸನಾತನ ಧರ್ಮಕ್ಕೆ ಸಂಬಂಧಿಸಿದ ವಿಷಯ ಬಂದಾಗ, ಸುಪ್ರೀಂ ಕೋರ್ಟ್ ಅಂತಹ ಆದೇಶಗಳನ್ನು ನೀಡುತ್ತದೆ. ಅರ್ಜಿದಾರರಿಗೆ ಪರಿಹಾರ ನೀಡಲು ಸಾಧ್ಯವಾಗದಿದ್ದರೆ, ಅವರನ್ನು ಅಪಹಾಸ್ಯ ಮಾಡಬೇಡಿ. ನನಗೆ ಇದರಿಂದ ನೋವಾಗಿತ್ತು. ನಾನು ಕುಡಿದಿರಲಿಲ್ಲ. ಇದು ಅವರ ಕ್ರಿಯೆಗೆ ನನ್ನ ಪ್ರತಿಕ್ರಿಯೆಯಾಗಿತ್ತು. ನನಗೆ ಭಯವಿಲ್ಲ. ಏನಾಯಿತು ಎನ್ನುವುದಕ್ಕೆ ನನಗೆ ವಿಷಾದವಿಲ್ಲ” ಎಂದು ಹೇಳಿದ್ದಾರೆ.

ಘಟನೆಯನ್ನು ವಿವರಿಸಿದ ವಕೀಲರು ಮಾಧ್ಯಮಗಳಿಗೆ ತಿಳಿಸಿದ್ದು, ಸಿಜೆಐ ನೇತೃತ್ವದ ಪೀಠವು ವಕೀಲರ ಪ್ರಕರಣಗಳ ಪ್ರಸ್ತಾಪವನ್ನು ಆಲಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಿದರು. ಕಿಶೋರ್ ಎತ್ತರದ ವೇದಿಕೆಯ ಬಳಿಗೆ ಬಂದು ತನ್ನ ಶೂ ತೆಗೆದು ನ್ಯಾಯಾಧೀಶರ ಕಡೆಗೆ ಎಸೆಯಲು ಪ್ರಯತ್ನಿಸಿದರು.

ಕಿಶೋರ್ ಅವರನ್ನು ನ್ಯಾಯಾಲಯದ ಆವರಣದಿಂದ ಬೇಗನೆ ಹೊರಗೆ ಕರೆದೊಯ್ಯಲಾಯಿತು. ಕರೆದೊಯ್ಯುವಾಗ, ವಕೀಲ ರಾಕೇಶ್‌ ಕಿಶೋರ್‌ “ಸನಾತನ ಕಾ ಅಪ್ಮಾನ್ ನಹಿ ಸಹೇಂಗೆ” (ಸನಾತನ ಧರ್ಮಕ್ಕೆ ಮಾಡುವ ಅವಮಾನಗಳನ್ನು ಸಹಿಸುವುದಿಲ್ಲ) ಎಂದು ಕೂಗುತ್ತಿರುವುದು ಕೇಳಿಸಿತು.

ಘಟನೆಯ ನಂತರ ರಾಕೇಶ್‌ ಕಿಶೋರ್‌ ಭೇಟಿಯಾದ SCBA ಜಂಟಿ ಕಾರ್ಯದರ್ಶಿ ಮೀನೇಶ್ ದುಬೆ, ವಕೀಲರ ಕೃತ್ಯ ಸಮರ್ಥನೀಯವಲ್ಲ ಎಂದಾಗಿದ್ದರೂ, ಅವರಿಗೆ ಯಾವುದೇ ತಪ್ಪಿತಸ್ಥ ಭಾವನೆ ಇದ್ದಿರಲಿಲ್ಲ. ತಾವು ಮಾಡಿದ್ದು ಸರಿ ಎಂದಿದ್ದಲ್ಲದೆ, ಕ್ಷಮೆ ಯಾಚಿಸಲು ನಿರಾಕರಿಸಿದ್ದರು.

ಯಾವುದೇ ರಾಜಕೀಯ ಪಕ್ಷದ ಲಿಂಕ್‌ ಇಲ್ಲ
ನನ್ನ ಈ ಕೃತ್ಯಕ್ಕೆ ಜೈಲು ಎದುರಿಸಲು ಕೂಡ ಸಿದ್ದ ಎಂದ ರಾಕೇಶ್‌ ಕಿಶೋರ್‌, ಯಾವುದೇ ರಾಜಕೀಯ ಪಕ್ಷದ ಜೊತೆಗೂ ನಾನಿಲ್ಲ ಎಂದರು. ನಾನು ಜೈಲಲ್ಲಿದ್ದರೆ ಉತ್ತಮ ಎನಿಸುತ್ತಿತ್ತು. ನಾನು ಮಾಡಿದ ಕೃತ್ಯಕ್ಕೆ ನನ್ನ ಕುಟುಂಬ ಸಂತೋಷವಾಗಿಲ್ಲ. ಆದರೆ, ಅವರಿಗೆ ಅರ್ಥ ಮಾಡಿಸುವುದು ಕಷ್ಟವಾಗುತ್ತಿದೆ ಎಂದಿದ್ದಾರೆ.

ಈ ಘಟನೆಯಿಂದ ಮುಜುಗರಕ್ಕೊಳಗಾದ ಅವರ ಕುಟುಂಬವು ಸಾರ್ವಜನಿಕವಾಗಿ ಪ್ರತಿಕ್ರಿಯಿಸಲು ನಿರಾಕರಿಸಿತು. ಕಿಶೋರ್ ತನ್ನ ಸಂಬಂಧಿಕರು “ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ” ಎಂದು ಒಪ್ಪಿಕೊಂಡರು, ಆದರೆ ಅವರು ಪ್ರಚೋದನೆಯಿಂದಲ್ಲ, ದೃಢನಿಶ್ಚಯದಿಂದ ಹೀಗೆ ಮಾಡಿದ್ದಾಗಿ ತಿಳಿಸಿದ್ದಾರೆ.

Share:

administrator

Leave a Reply

Your email address will not be published. Required fields are marked *